ಸಂಚಯ – ಪ್ರಸ್ತುತ ಪಡಿಸುತ್ತಿದೆ

‍ಪಂಡಿತ 
ಚನ್ನಪ್ಪ ಎರೇಸೀಮೆ

ಅವರ ಸಾಹಿತ್ಯ ಸಂಚಯ

ಈ ಯೋಜನೆಯು ಡಿಜಿಟಲೀಕರಣದ ಮೂಲಕ, ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ವಿಶೇಷವಾಗಿ ಹಳಗನ್ನಡ ಸಾಹಿತ್ಯ , ವ್ಯಾಕರಣ ಶಾಸ್ತ್ರ ಮತ್ತು ಶರಣ ಸಾಹಿತ್ಯಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಚನ್ನಪ್ಪ ಎರೇಸೀಮೆಯವರ ಜೀವನದ ಇತಿಹಾಸ, ಸಾಹಿತ್ಯ, ಇತ್ಯಾದಿಗಳನ್ನು ಜಗತ್ತಿನಾದ್ಯಂತ ಕನ್ನಡಿಗರಿಗೆ ತಲುಪಿಸುವ ‍ಆಶಯ ಹೊಂದಿದೆ . ಚನ್ನಪ್ಪ ಎರೇಸೀಮೆ‍ಯವರ ಕೃತಿಗಳು, ಲೇಖನಗಳು, ಅವರ ಜೀವನಕ್ಕೆ ಸಂಬಂಧಿಸಿದ ಮಾಹಿತಿ ಇತ್ಯಾದಿ ನಿಮ್ಮಲ್ಲಿದ್ದರೆ, ನಮ್ಮೊಂದಿಗೆ ಹಂಚಿಕೊಂಡು ಮತ್ತಷ್ಟು ಸಾಹಿತ್ಯಾಸಕ್ತರಿಗೆ ಅದನ್ನು ಲಭ್ಯವಾಗಿಸುವಂತೆ ಮಾಡುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಕೋರುತ್ತೇವೆ .

ಪಂಡಿತ ಚನ್ನಪ್ಪ ಎರೇಸೀಮೆಯವರ ಜೀವನದ ಕಿರುನೋಟ, ಡಿಜಿಟಲೀಕರಿಸಿದ ಕೃತಿಗಳು, ಚಿತ್ರಪಟಗಳು, ಲೇಖನಗಳು, ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ಇತ್ಯಾದಿಗಳನ್ನು ಈ ಜಾಲತಾಣದ ಮೂಲಕ ನಿಮ್ಮ ಮುಂದಿಡಲಾಗುವುದು. ಮತ್ತಷ್ಟು ಮಾಹಿತಿಗೆ ಕಾದುನೋಡಿ…

ಚನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವ

ಲಿಂಗೈ‍ಕ್ಯ ಚನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವವನ್ನು ರವೀಂದ್ರ ಕಲಾಕ್ಷೇತ್ರ, ಬೆಂಗಳೂರಿನಲ್ಲಿ, ದಿನಾಂಕ ೧೨ನೇ ಅಕ್ಟೋಬರ್ ೨೦೧೯ ಶನಿವಾರದಂದು ಸಂಜೆ ೩ ರಿಂದ ೮ ರವರೆಗೆ  ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೆಡೆದ ‍ಸಾಹಿತ್ಯ ಗೋಷ್ಠಿಯೊಂದು ನಡೆಯಲ್ಲಿ, ಅವರು ಸಾಹಿತ್ಯ, ಶಿಕ್ಷಣ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಯನ್ನು ಚರ್ಚಿಸಲಾ‍‍ಯಿತು.  ಎರೇಸೀಮೆಯವರಿಗೆ ಅತ್ಯಂತ ಪ್ರಿಯವಾಗಿದ್ದ ಹಿಂದುಸ್ಥಾನಿ ಸಂಗೀತ ಕಚೇರಿಯನ್ನು ಶ್ರೀಮತಿ ಸಂಗೀತ ಕಟ್ಟಿಯವರು ನಡೆಸಿಕೊ‍‌ಟ್ಟರು.

ಕಾರ್ಯಕ್ರಮದ ರೆಕಾರ್ಡಿಂಗ್ ಅನ್ನು ಇಲ್ಲಿ ವೀಕ್ಷಿಸಬಹುದು:

ಎರೇಸೀಮೆಯವರ ಕುರಿತಾದ ತಮ್ಮಲ್ಲಿರಬಹುದಾದ ಯಾವುದೇ ರೀತಿಯ ಸಂಪನ್ಮೂಲವನ್ನು (ಲೇಖನಗಳು/ಫೋಟೋ/ ನಿಮ್ಮ ಅನಿಸಿಕೆ /ಇತ್ಯಾದಿ ) ತಾವು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾದಲ್ಲಿ ಅವರ ಸಾಹಿತ್ಯದ ಜೊತೆಗೆ ನೆನಪುಗಳನ್ನೂ ಸಂರಕ್ಷಿಸಲು ಸಾಧ್ಯವಾಗುವುದು. 

ತಮ ಅಮೂಲ್ಯ ಸಹಕಾರವನ್ನು ಕೋರುವ ಎರೇಸೀಮೆ ಕುಟುಂಬಸ್ಥರು.

ನನ್ನ ಕಥೆ… 

“ಮನುಷ್ಯನ ಭಾವಕೋಶ ಬಹುದೊಡ್ಡ ಕಣಜ. ಇದು ಹುಟ್ಟಿದಂದಿನಿಂದ ಸಾಯುವವರೆಗೆ ಸಂಸ್ಕಾರಗಳನ್ನು ತನ್ನಲ್ಲಿ ತುಂಬುತ್ತಲೂ, ಕೆಲವನ್ನು ಸ್ಥಿರೀಕರಿಸುತ್ತಲೂ ಇರುತ್ತದೆ. ಇಲ್ಲಿ ಸಂಗ್ರಹವಾಗಿರುವ ಶಬ್ದಚಿತ್ರ, ವ್ಯಕ್ತಿಚಿತ್ರ, ದೇಶ, ಕಾಲ, ಜನಜೀವನ, ಸಿಹಿಕಹಿ, ಸುಖದುಃಖ, ಆಮೋದ ಪ್ರಮೋದ, ಸುಳ್ಳು, ಕಳವು ಹಾದರ, ಪುಣ್ಯ ಪಾಪ ಮೊದಲಾದ ಅನುಭವಗಳನ್ನು ಸಂಸ್ಕಾರರೂಪವಾಗಿ ಹಿಡಿದಿಟ್ಟು. ಬಿಡುತ್ತದೆ. ಸನ್ನಿವೇಶ ಬಂದಾಗ ಆಯಾಯ ಭೂತಗಳನ್ನು ಹೊರಹಾಕುತ್ತವೆ. ಭಾವದಲ್ಲಿ ಸಂಗ್ರಹವಾದ ಸಂಸ್ಕಾರಗಳೇ ಬಹುಮಟ್ಟಿಗೆ ಸ್ವಭಾವಗಳಾಗಿ ಮಾನವನನ್ನು ರೂಪಿಸುತ್ತವೆ.”

– ಇದು ಎರೇಸೀಮೆಯವರ ಜ್ಞಾನಾನುಭವಸಿಂಧುವಿನ ಒಂದು ಬಿಂದು.

ಪಂ. ಚೆನ್ನಪ್ಪನವರು ತಮ್ಮ ನೆನಪಿನ ಗಣಿಯಿಂದ ಅಗೆದು ತೆಗೆದ ಅನರ್ಫ್ಯ ರತ್ನಗಳು ಇಲ್ಲಿವೆ. ಸ್ವಾರಸ್ಕವೆಂದರೆ ಅವರ ನಿರೂಪಣೆಯಲ್ಲಿ ನಮ್ಮನಾಡಿನ ಶೈಕ್ಷಣಿಕ ಹಾಗೂ ಸಾಮಾಜಿಕ ಇತಿಹಾಸದ ಪುಟಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಸಾಹಿತ್ಯದ ಬಾಯಿಗೆ ಸಿಕ್ಕದ ಅನೇಕ ಅಮೂಲ್ಯವಾದ ಜೀವನಶ್ರದ್ಧೆಯ, ಹೃದಯಶ್ರೀಮಂತಿಕೆಯ ವ್ಯಕ್ತಿಗಳ ಪರಿಚಯ ಇಲ್ಲಿ ಸಾಲುಗೊಂಡಿವೆ. ಹಿಂದಿನ ನಮ್ಮ ಗ್ರಾಮೀಣರ ಬದುಕಿನ ರಸಸ್ಥಾನಗಳು ಇಲ್ಲಿ ತೆರೆದುಕೊಂಡಿವೆ.

ಒಂಭತ್ತು ರೂ. ಪಗಾರದ ಒಬ್ಬ ಗಾಂವಠೀ ಶಾಲೆಯ ಮೇಷ್ಟರು ಕಡುಬಡತನ, ನಿರುತ್ಸಾಹದ ಸನ್ನಿವೇಶದಲ್ಲೂ ಧೈರ್ಯ, ಸಾಹಸ, ಶ್ರದ್ಧಾಸಕ್ತಿಗಳಿಂದ ಹಂತಹಂತವಾಗಿ ಮೇಲೇರಿ ಹೈಸ್ಕೂಲು, ತರಬೇತಿ ಕಾಲೇಜುಗಳಲ್ಲಿ ಭಾಷಾಬೋಧಕರಾಗಿ ಕೀರ್ತಿಗಳಿಸುವ ಹಂತಕ್ಕೆ ಏರಿದ ವೀರಗಾಥೆ ಇದು. ಅದರ ಜೊತೆಗೆ ಇಂದು ನೋಡ ಸಿಕ್ಕದ ಪ್ರಾದೇಶಿಕ ಸೊಗಡಿನ ವಿಶಿಷ್ಟ ಜೀವನದರ್ಶನ ಇಲ್ಲಿ ಆಗುತ್ತದೆ. ಇಲ್ಲಿ ಬಳಸಿರುವ ಭಾಷೆಯೂ ಸಹ ವಿಶಿಷ್ಟ ಬನಿಯ ಉತ್ತರ ಕರ್ನಾಟಕದ್ದು ಅವರ ನಿರೂಪಣಾಶೈಲಿ ಆಕರ್ಷಕ. ಅವರು ಓದುಗರೊಡನೆ ಸಂವಾದ ಮಾಡುತ್ತಾ ಕಥೆ ಹೇಳಿದ್ದಾರೆ.

ನವರತ್ನರಾಂ ಅವರ ‌’ಕೆಲವು ನೆನಪುಗಳು’, ಎಂ. ಆರ್‌. ಶ್ರೀಯವರ ‘ರಂಗಣ್ಣನ ಕನಸಿನ ದಿನಗಳು’, ಕೆ.ಆರ್‌. ರಾಮಚಂದ್ರನ್‌ ಅವರ ‘ತಾಪೇದಾರಿ’ ಮೊದಲಾದ ವೃತ್ತಿಪರ ಅನುಭವ ಕಥನಗಳ ಶ್ರೇಣಿಗೆ ಪಂ. ಚೆನ್ನಪ್ಪ ಎರೇಸೀಮೆಯವರ ‘ನನ್ನ ಕಥೆ’ ಸೇರಿತು. ಇಂಥ ರಸಬುತ್ತಿಯನ್ನು ಕನ್ನಡಿಗರಿಗೆ ನೀಡಿದ ಪಂ. ಚೆನ್ನಪ್ಪ ಎರೇಸೀಮೆಯವರು ಅಭಿನಂದನಾರ್ಹರು.

ಎರೇಸೀಮೆಯವರ ಆತ್ಮ ಚರಿತ್ರೆಯಬಗ್ಗೆ  ದಿವಂಗತ ಶ್ರೀ ಟಿ ಆರ್ ಮಹಾದೇವಯ್ಯನವರ ಅಭಿಪ್ರಾಯ.

ಸಾಹಿತ್ಯಸಂಪದ ಮತ್ತು ಸಾಧನೆಗಳ ಅಂಕಿ ಅಂಶಗಳು

 

ಫ್ರೌಡಗ್ರಂಥಗಳು, ವಿಶೇಷ ಸಂಚಿಕೆಗಳು, ನಿಯತಕಾಲಿಕೆಗಳಿಗೆ ಬರೆದ ಲೇಖನಗಳು

ಸ್ವತಂತ್ರ ಕೃತಿಗಳು

ಇತರರೊಡನೆ ಬರೆದ ಕೃತಿಗಳು

ಭಾರತ ಸರಕಾರದ ಪ್ರಕಟಣಾ ಶಾಖೆಗೆ

ಕ.ಸಾ.ಪ ದತ್ತಿ ಉಪನ್ಯಾಸಗಳು, ಅಕಾಡೆಮಿ ಹಾಗೂ ವಿಚಾರ ಸಂಕಿರಣಗಳ ಉಪನ್ಯಾಸಗಳು

ಬೆಂಗಳೂರು ವಿವಿ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಗಾಗಿ ಬರೆದ ಲೇಖನಗಳು

ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಕಾರ್ಯಕ್ರಮಗಳು

ಶೈಕ್ಷಣಿಕ ಪ್ರಸಾರಗಳು ಹಾಗೂ ಇತರೆ

ಇನ್ನಿತರ ವಿಶೇಷಾಂಶಗಳು

ಸಾರ್ವಜನಿಕ ಪ್ರವಚನಗಳು

ಸಾರ್ವಜನಿಕ ಸಮ್ಮಾನಗಳು

ಕಾರ್ಯನಿರ್ವಹಿಸಿದ ಕಮಿಟಿಗಳು

ನೆನಪಿನಂಗಳದಿಂದ

ಚನ್ನಪ್ಪ ಎರೇಸೀಮೆಯವರ ಆಪ್ತವಲಯದಿಂದ ಹರಿದು ಬಂದ ನೆನಪಿನಾಳದ ಮಾತುಗಳು

ಸಿದ್ಧಗಂಗಾ ತ್ರೈಮಾಸಿಕಗಳು

ಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ. ಸಿ. ಕಮಲಾ ಅವರಿಗೂ ಸಂಚಯ ಮತ್ತು ಸಂಚಿ ಫೌಂಡೇಷನ್ ಪರವಾಗಿ ಧನ್ಯವಾದಗಳು. ಈ ಡಿಜಿಟಲೀಕರಣದ ಕಾರ್ಯವನ್ನು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ಬೆಂಗಳೂರು - ಇಲ್ಲಿ ಪಬ್ಲಿಕ್ ರಿಸೋರ್ಸ್ ಆರ್ಗ್ ‌ನ 'Servants Of Knowledge' ಯೋಜನೆ ಅಡಿ ಸಂಚಯ ನೆರವೇರಿಸಿದೆ. Internet Archive...

ಶ್ರೀಮತಿ ಜಾನಕಿ

ನನ್ನ ಕಥೆ ಪುಸ್ತಕ ಹಾಗೂ ಎರೇಸೀಮೆಯವರ ಬಗ್ಗೆ ಶ್ರೀಮತಿ ಜಾನಕಿಕೃಷ್ಣಸ್ವಾಮಿ ಅವರ ಅಭಿಪ್ರಾಯಕ್ಕೆ ಧನ್ಯವಾದಗಳು. Madam,I read sir’s ‘nanna kathe’ ........ Superb. .... I was studying in basaweswara high school and was in 10th standard iduring 1965-66. As there was no Kannada teacher at that time, the management of basaweswara high school arranged mr. yereseeme to teach Kannada on Saturday’s 3pm to 6 and Sunday’s 9 am to 12pm. Those were the days which I cherish in my memory even today. I was his favourite student...

ಕೃತಿಯ ಹೆಗ್ಗಳಿಕೆ – ಪ್ರೊ. ಡಿ. ಚಂದ್ರಪ್ಪ

ಧರ್ಮನಿಷ್ಠ ಸಂಪಾದಕ - ಪಂಡಿತ ಚನ್ನಪ್ಪ ಎರೆಸೀಮೆ ಮೊದಲಿಗೆ ವೈಯಕ್ತಿಕ ಪರಿಚಯವಿರಲಿಲ್ಲ. ಸಾಮಾನ್ಯ ಎತ್ತರದ, ಎಣ್ಣೆಗೆಂಪಿನ ಕನ್ನಡಕಧಾರಿ,  ಕಚ್ಚೆ ಪಂಚೆ, ಜುಬ್ಬ ಧರಿಸಿದ ಪರಿಶುದ್ಧ ವಸ್ತ್ರಧಾರಿ, ಪಾದರಸ ನಡಿಗೆಯ ಚಾಲೂಕು ವ್ಯಕ್ತಿತ್ವದ ಶಿಕ್ಷಕರಾಗಿದ್ದವರು ಪಂಡಿತ ಚನ್ನಪ್ಪ ಎರೆಸೀಮೆ ಅವರು. ಅವರನ್ನು ನಾನು ಕಂಡದ್ದು ಸಿದ್ಧಗಂಗಾ ಕ್ಷೇತ್ರದಲ್ಲಿ. ಶ್ರೀಕ್ಷೇತ್ರದ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುವ ಸಂದರ್ಭ ಮತ್ತು ಕಾಲೇಜು ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ. ಪುಣ್ಯಕ್ಷೇತ್ರ ಸಿದ್ಧಗಂಗಾ ಮಠಕ್ಕೆ ನಾನಾ ಕಾರ್ಯ ನಿಮಿತ್ತ ಬಂದು ಹೋಗುವ ಎಲ್ಲಾ ಹಂತದ ವೃತ್ತಿಯ ಗಣ್ಯಾತಿಗಣ್ಯರ ಗಮನಿಕೆ ಎಲ್ಲರಿಗೂ...

ಎಚ್.ಎಸ್. ಸಿದ್ಧಗಂಗಪ್ಪ – ಸಾಂದರ್ಭಿಕ ಲೇಖನ

ಪಂಡಿತ ಚೆನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವ - ಸಾಂದರ್ಭಿಕ ಲೇಖನ ಆದರ್ಶ ಶಿಕ್ಷಕ, ಶ್ರೇಷ್ಠ ವಿದ್ವಾಂಸ, ನ್ಮಡಿಗಾರುಡಿಗ ಲಿಂಗೈಕ್ಯ ಪಂ. ಚೆನ್ನಪ್ಪ ಎರೇಸೀಮೆಯವರು   ಆದರ್ಶ ಶಿಕ್ಷಕ, ನುಡಿಗಾರುಡಿಗ, ಶಿಕ್ಷಣ ತಜ್ಞ, ಸರಳತೆ, ಸಜ್ಜನಿಕೆ, ಸಹೃದಯತೆಯ ಸಾಕಾರಮೂರ್ತಿಯಾಗಿದ್ದ ಪಂ. ಚೆನ್ನಪ್ಪ ಎರೇಸೀಮೆಯವರು ಶಿಕ್ಷಣ, ಸಾಹಿತ್ಯ, ಸಂಪಾದನೆ, ಕೀರ್ತನೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆ ಸದಾ ಹಚ್ಚಹಸಿರು. ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಎರಡು ಗುಂಪಿನ ಜನರನ್ನು ಕಾಣಬಹುದು. ಕೆಲವರು ಕೀರ್ತಿಯ ಬೆನ್ನು ಹತ್ತಿದರೆ ಮತ್ತೆ ಕೆಲವರಿಗೆ ಕೀರ್ತಿಯೇ ಬೆನ್ನತ್ತಿ...

ಮೂರ್ತಿ ಮುದಿಗೊಂಡ ಇವರ ಕುಂಚದಲ್ಲಿ ಅರಳಿದ ಎರೇಸೀಮೆಯವರು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುದಿಗೊಂಡ ಹಳ್ಳಿಯ ಕಲಾವಿದ ಮೂರ್ತಿ ಮುದಿಗೊಂಡ ಇವರ ಕುಂಚದಲ್ಲಿ ಅರಳಿದ ಎರೇಸೀಮೆಯವರು.

ಎಸ್‌. ಪ್ಲೋಮಿನ್ದಾಸ್ ಚಿತ್ರದುರ್ಗ

ಎಸ್‌. ಪ್ಲೋಮಿನ್ದಾಸ್ ನೂರುವರ್ಷವೂ ಚಿರಸ್ಕರಣೀಯವಾಗೆಲ್ಲರ ಚಿತ್ರಗಳಲ್ಲಿ ಚಿರವಾಗುಳಿದಿರುವ ಗುರುದೇವರಿಗೆ ನನ್ನ ನಮನಗಳು. “ನಮ್ಮೂರು ಚಿತ್ರದುರ್ಗ” ಎಂಬ‍ ವಿಷಯದ ಬಗ್ಗೆ ಪ್ರಬಂಧ ಒಂದನ್ನು ವಿರಚಿಸಿ ವಾಚಿಸುವ ಸ್ಪರ್ಧೆಯನ್ನು, ಚಿತ್ರದುರ್ಗದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ; 1960-61ರ ಸಾಲಿನಲ್ಲಿ ಏರ್ಪಡಿಸಲಾಗಿತ್ತು. ಆಯ್ಕೆ ಆದ ವಿದ್ಯಾರ್ಥಿಗೆ, ಬೆಂ‍ಗಳೂರಿನ ಆಕಾಶವಾಣಿಯಲ್ಲಿ ಮಾತನಾಡುವ ಸೌಭಾಗ್ಯ! ಪಂಡಿತ ಚನ್ನಪ್ಪ ಎರೇಸೀಮೆಯವರು ಕನ್ನಡ ಪಂಡಿತರಾಗಿ ಅದೇ ಪ್ರೌಡಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ತಲೆಗೊಂದು ಟೋಪಿ, ಕಚ್ಚೆ ಪಂಚೆ, ಕೋಟುಧರಿಸಿ ಸೇವೆಗೆ ಹಾಜರಾಗುತ್ತಿದ್ದರು. ಅವರದು...

ಸಿ. ಚಂದ್ರಮತಿ

ಸಿ. ಚಂದ್ರಮತಿಜೋಗಿಮಟ್ಟಿ ರೋಡ್5 ನೇ ಕ್ರಾಸ್, ಚಿತ್ರದುರ್ಗ ನನಗೆ ಪುಸ್ತಕ ಓದುವ ಹವ್ಯಾಸ ಬಹಳ. ಹೀಗೆ ನಮ್ಮ ಸ್ನೇಹಿತೆ ಮನೆಗೆ ಹೋದಾಗ ಮಹಾಮನೆ ಎಂಬ ಪುಸ್ತಕದಲ್ಲಿ ಪಂಡಿತ ಚನ್ನಪ್ಪ ಎರೆಸೀಮೆಯವರ ಸ್ಮರಣಾರ್ಥದ ಬಗ್ಗೆ ಓದಿದೆ. ಅವರ ಪರಿಚಯವಿದ್ದ ಕಾರಣ ಅವರ ಜೊತೆ ಕಳೆದ ಕೆಲ ಸಿಹಿ ನೆನಪುಗಳು ನೆನಪಿಗೆ ಬಂದವು. 57 ವರ್ಷಗಳ ಹಿಂದಿನ ಮಾತು. ನನಗೆ ಆಗ ಸುಮಾರು 13 ವರ್ಷ ವಯಸ್ಸು. ನಮ್ಮ ತಂದೆ ಪಟೇಲ್ ಚಂದ್ರಶೇಖರಪ್ಪ ಚಿತ್ರದುರ್ಗ ಕೆಳ ಕೋಟೆಯಲ್ಲಿ ವಾಸವಾಗಿದ್ದರು. ನಮ್ಮ ತಂದೆ ಮತ್ತು ಪಂಡಿತ ಚನ್ನಪ್ಪ ಎರೆಸೀಮೆಯವರು ಬಹಳ ಆತ್ಮೀಯ ಸ್ನೇಹಿತರಾಗಿದ್ದರು. ಅವರು ನಮ್ಮ ಮನೆಯ ಎದುರುಗಡೆಯ ಮನೆಯಲ್ಲಿ ವಾಸವಾಗಿದ್ದರು. ಅವರ...

ಪತ್ರಿಕೆಗಳು ಮತ್ತು ಇತರ ಕಡೆಗಳಲ್ಲಿ...

ಪತ್ರಿಕಾ ಪ್ರಕಟಣೆಗಳು, ಪತ್ರಿಕೆಗಳಲ್ಲಿ ಚನ್ನಪ್ಪ ಎರೇಸೀಮೆಯವರ ಬಗ್ಗೆ ಪ್ರಕಟಗೊಂಡ ಲೇಖನ ಇತ್ಯಾದಿಗಳನ್ನು ಇಲ್ಲಿ ಕಾ‍ಣಬಹುದು.

ಸಿದ್ಧಗಂಗಾ ತ್ರೈಮಾಸಿಕಗಳು

ಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ...

ಲಿಂ. ಪಂಡಿತ ಚೆನ್ನಪ್ಪ ಎರೇಸೀಮೆ ಅವರ ಜನ್ಮಶತಮಾನೋತ್ಸವ ಸಮಾರಂಭ

ಲಿಂ. ಪಂಡಿತ ಚೆನ್ನಪ್ಪ ಎರೇಸೀಮೆ ಅವರ ಜನ್ಮಶತಮಾನೋತ್ಸವ ಸಮಾರಂಭ

ಆದರ್ಶ ಶಿಕ್ಷಕ, ನುಡಿಗಾರುಡಿಗ, ಶಿಕ್ಷಣತಜ್ಞ, ಕೀರ್ತನಕಾರರಾಗಿ ನಾಡು, ನುಡಿಗೆ ಅಪಾರ ಸೇವೆಯನ್ನು ಸಲ್ಲಿಸಿದ್ದ ಪಂ. ಚೆನ್ನಪ್ಪ ಎರೇಸೀಮೆಯವರ ಜನ್ಮಶತಮಾನೋತ್ಸವ ಸಮಾರಂಭವನ್ನು ಅಕ್ಟೋಬರ್ 12, 2019 ರಂದು ಮಧ್ಯಾಹ್ನ 3 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಸುತ್ತೂರು ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ...

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಪಂಡಿತ ಚನ್ನಪ್ಪ ಎರೇಸೀಮೆಯವರ ಸಾಹಿತ್ಯ ಸಂಚಯದ ಬಗ್ಗೆ ಮಾಹಿತಿಗೆ, ನಿಮ್ಮಲ್ಲಿರುವ ಮಾಹಿತಿಯನ್ನು ನಮ್ಮೊಡನೆ ಹಂಚಿಕೊಳ್ಳಲು

yckamala @ gmail.com ಗೊಂದು ಸಂದೇಶ ಕಳುಹಿಸಿ.

ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.