ಚನ್ನಪ್ಪ ಎರೇಸೀಮೆ

ಜೇನು

ಮಕ್ಕಳ ವಿಚಾರ ಸಾಹಿತ್ಯ (ವಿಜ್ಞಾನ ವಿಭಾಗ)

ಪ್ರಾಥಮಿಕ ನಾಲ್ಕನೇ ತರಗತಿಯ ಮಕ್ಕಳ ವಯೋಮಿತಿಯನ್ನು ಲಕ್ಷ್ಯದಲ್ಲಿಟ್ಟು ರಚಿಸಿದುದು. 

ಇದು ಮೈಸೂರು ವಿದ್ಯಾ ಇಲಾಖೆಯಿಂದ ಪ್ರಥಮ ಬಹುಮಾನ ಪಡೆದ ಪುಸ್ತಕ

ಪುಸ್ತಕದ ಬಗ್ಗೆ ಅಭಿಪ್ರಾಯ

ಅ. ನ. ಕೃಷ್ಣರಾಯರು

ಶ್ರೀ ಚನ್ನಪ್ಪ ಎರೇಸೀಮೆ ಅವರಜೇನುಪುಸ್ತಕವನ್ನು ಓದಿ ನೋಡಿ ಸಂತೋಷಪಟ್ಟಿದ್ದೇನೆ. ಮಕ್ಕಳ ಸಾಹಿತ್ಯಕ್ಕಾಗಿ ಶ್ರೀಯುತರು ವಿಶೇಷವಾಗಿ ಶ್ರಮಿಸಿದ್ದಾರೆಶಿಕ್ಷಣ ತಜ್ಞರೂ, ವಿದ್ವಾಂಸರೂ, ಒಳ್ಳೆಯ ವಾಗ್ಮಿಗಳೂ ಆದ ಶ್ರೀ ಎರೇಸೀಮೆ ಅವರು ಮಕ್ಕಳ ಮನಸ್ಸು ಅಭಿರುಚಿಗಳನ್ನರಿತು, ಅವುಗಳಿಗೆ ಅನುಗುಣವಾಗಿ ಬರೆಯಬಲ್ಲ ದಕ್ಷ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಜೇನು ಪುಸ್ತಕದ ಭಾಷೆ, ನಿರೂಪಣೆ, ಭಾವಾಭಿವ್ಯಕ್ತಿಗಳೆಲ್ಲವೂ ತೃಪ್ತಿಕರವಾಗಿವೆ.

{

ಮಂದ ಮೇಲೆ ಜೇನಂಗೂಡು
ಏನು ಸಂಘ ಜೀವನ!
ಮನುಜದೇಹಕಿದರ ತುಪ್ಪ
ಅಮರ ಸಂಜೀವನ!
ಮ‍‌ಧುರ ಸುಖದ ಭಾವನಾ

ಮುಳ್ಳನು ಕಂಡು ಹೆದರುವ ಬಾಲೆಗೆ
ಗುಲಾಬಿ ಹೂವೇಕೆ?
ಕಡಿತದ ಭಯದಲಿ ಹೆದರುವ ಮನುಜಗೆ
ಜೇನುತುಪ್ಪವೇಕೆ?

– ಚನ್ನಪ್ಪ ಎರೇಸೀಮೆ

%d bloggers like this: