ಚನ್ನಪ್ಪ ಎರೇಸೀಮೆ & ಎಚ್. ದೇವೀರಪ್ಪ

ಚೆನ್ನವೀರ ಜಂಗಮದೇವ ವಿರಚಿತ ಷಟ್ಸ್ಥಲ ವಲ್ಲಭ

‍ಪ್ರಕಾಶಕರು: ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ

ಕವಿಯ ಕಾಲ, ದೇಶ

“‌ಷಟ್ಸ್ಥಲ ವಲ್ಲಭ’ ಎಂಬ ಈ ಗ್ರಂಥವನ್ನು ಚೆನ್ನವೀರೇಶ್ವರ ಎಂಬುವನು
ರಚಿಸಿದ್ದಾನೆ. . ಈ ಸಂಗತಿಯು ಗ್ರಂಥದ ಆಶ್ವಾಸಾಂತ್ಯದ ಗದ್ಯಗಳಿಂದ ಗೊತ್ತಾಗು
ತ್ತದೆ. ಆದರೆ ಪ್ರಸ್ತುತ ಗ್ರಂಥದಿಂದಲಾಗಲೀ, ಇತರ ಮೂಲಗಳಿಂದಾಗಲಿ ಈ ಕವಿಯ ಕಾಲದೇಶಾದಿಗಳ ವಿಚಾರವಾಗಿ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ.

ಗ್ರಂಥಾರಂಭದಲ್ಲಿ ಬಸವಣ್ಣ, ರೇವಣಸಿದ್ಧ, ಅಲ್ಲಮ, ಸಿದ್ಧರಾಮ, ಮುಸುಟಿಯ
ಚೌಡಯ್ಯ ಮುಂತಾದ ಶರಣರ ಸ್ರೋತ್ರವಿದೆ ; ಮಾಯಿದೇವ, ಶಂಕರದೇವ,
ಕೆರೆಯ ಪದ್ಮರಸ, ಕೇಶಿರಾಜ, ಪಾಲ್ಕುರಿಕೆ ಸೋಮನಾಥ, ಹರಿಹರದೇವ, ಕಲ್ಮಠದ
ಪ್ರಭ, ಜಕ್ಕಣಯ್ಯ, ಸಮಾಧಿಯ ಸೋಮ-ಇವರ ಹೆಸರುಗಳಿವೆ… ಇವರಲ್ಲಿ
ಯಾರೂ ಕ್ರಿ ಶ. ೧೫೦೦ ರಿಂದ ಈತೆಗೆ ಬಾಳಿದವರಲ್ಲವೆಂಬುದು ‍‍ನಿಶ್ಚಿತ. ಇಷ್ಟೇ
ಪ್ರಸ್ತುತ ಕೃತಿಯಿಂದ ಕನಿಯ ಕಾಲದ ಬಗೆಗೆ ದೊರೆಯುವ ಸೂಚನೆ.

ಆದುದರಿಂದ ಈಗ ಈ ಕೃತಿಯ ನಾಯಕನ ಕಾಲಮಾನವನ್ನು ಮೊದಲು
ಖಚಿತಪಡಿಸಿಕೊಳ್ಳುವುದೊಂದೇ ಉಳಿದಿರುವ ಮಾರ್ಗ.

“ಈತನು (ತೋಂಟದ ಸಿದ್ಧಲಿಂಗಯತಿಯು) ವಿಜಯನಗರದ ರಾಜನಾದ
ವಿರೂಪಾಕ್ಷನ (೧೪೬೭-೧೪೭೮) ಕಾಲದಲ್ಲಿದ್ದಂತೆ ವಿರೂಪಾಕ್ಷಸಂಡಿತನ (೧೫೮೪) ಚೆನ್ನಬಸವ ಪುರಾಣದಿಂದ ಊಹಿಸಬಹುದಾಗಿದೆ. ಇವನ ಕಾಲವು ಸುಮಾರು ೧೪೭೦ ಆಗಬಹುದು” ಎಂದಿರುವ ಕವಿಚರಿತೆಕಾರರು ಎಡೆಯೂರು ದೇವಸ್ಥಾನದ ಪ್ರಾಕಾರದಲ್ಲಿರುವ ಒಂದು ಶಿಲಾಶಾಸನ (ಕುಣಿಗಲ್‌ ೪೯)ವನ್ನೂ ಉಲ್ಲೇಖಿಸುತ್ತಾರೆ.

ಪುಸ್ತಕದ ಒಂದಷ್ಟು ಪುಟಗಳು

{

ಶ್ರೀ ಮಚ್ಚೈಳೇಂದ್ರ ಪುತ್ರೀಮುಖ ಸಗಸಿಜ ವಾಸಂತ ಹೇರಂಬತಾತಂ
ಸೋಮಂ ಶೈವಾಗಮಾಮ್ನಾಯನುತ ಮಹಿಮಧಾಮಂ ಮಹಾದೇವಶಂಭುಂ
ಹೈಮಾದ್ರೀಶಂ ವಿರೂಪಾಕ್ಷನ (ಭವನನಘಂ ಈಶ) ನಿಸ್ಸೀಮಧಾಮಂ
ರಾಮಂಭೂತೇಶ ರಕ್ಷಿಕೃನವರತ ಶಿವಾಜ್ವೈತವಿತ್ತೆನ್ನುವಂ ನೀಂ (೧-೧)

 

ಶ್ರೀಮತ್‌ ಹೈಮಾದ್ರಿಕನ್ಯಾಮುಖದುರುತರ ಲಾವಣ್ಯವಾರಾಸಿ ಚಂದ್ರಂ
ನಾಮಾದಿಸ್ತುತ್ಯನಾಮಂ ಶರಣಜನಲಲಾಮಂ ಪರಬ್ರಹ್ಮಧಾಮಂ
ವ್ಯೋಮಾತ್ಮಾಕ್ಷ್ಮಾನಿಲಾಗ್ನೇಂದುರುತರಣಿಜಲವೆಂಬೆಂಟಕ್ಕಂ ಕಾರಣಾಂಗಂ
ಪ್ರೇಮಂ ಕೈಮಿಕ್ಳುನೆನ್ಸಂ ಸಲಹು ಗಿರಿಶ ಭೂತೇಶನಾನಂದದಿಂದಂ (೧-೨)

%d bloggers like this: