ಪ್ರೊ. ಮಲೆಯೂರು ಗುರುಸ್ವಾಮಿ

ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ

ಪ್ರಕಾಶಕರು: ಜೆ.ಎಸ್.ಎಸ್. ಗ್ರಂಥಮಾಲೆ, ಮೈಸೂರು

ಅರಮನೆ ಶ್ರೀ ಪಂಚಗವಿ ಮಠ

ಅರಮನೆ ಶ್ರೀ ಪಂಚಗವಿ ಮಠವು ಚಾಮುಂಡಿಬೆಟ್ಟದ ತಪ್ಪಲಿನಲ್ಲಿದೆ. ಮಠವಿರುವ ಪ್ರದೇಶವನ್ನು ಈಗ ಶ್ರೀ ಗೌರೀಶಂಕರನಗರ ಎಂದು ಕರೆಯಲಾಗುತ್ತಿದೆ. ಇದನ್ನು ಅರಮನೆ ಶ್ರೀ ಪಂಚಗವಿ ಮಠ ಎಂದು ಕರೆಯುವುದರ ಹಿನ್ನೆಲೆ ಹೀಗಿದೆ:

ಮೈಸೂರು ರಾಜಮನೆತನದ ಅರಸರೊಬ್ಬರಿಗೆ ವಿಚಿತ್ರವಾದ ಖಾಯಿಲೆಯೊಂದು ಕಾಣಿಸಿಕೊಂಡಿತು. ರಾಜವೈದ್ಯರು ಸೇರಿದಂತೆ ಅನೇಕ ಕಡೆ ಅವರು ಚಿಕಿತ್ಸೆ ಪಡೆದರೂ ಖಾಯಿಲೆ ವಾಸಿಯಾಗದೆ ಉಲ್ಬಣಿಸುತ್ತ ಹೋಯಿತು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಗವಿಯೊಂದರಲ್ಲಿ ಶ್ರೀ ಶಿವಬಸವಸ್ವಾಮಿಗಳು ಎಂಬ ಶರಣ ಯೋಗಾನುಷ್ಠ್ಮಾನದಲ್ಲಿ ನಿರತರಾಗಿದ್ದರು. ಅವರ ಮಹಿಮಾತಿಶಯವನ್ನು ಕೇಳಿ ತಿಳಿದ ಮಹಾರಾಜರು ಸ್ವಾಮಿಗಳವರ ಬಳಿಗೆ ತೆರಳಿ, ತಮ್ಮ ಆರೋಗ್ಯದ ಸಮಸ್ಯೆಯನ್ನು ಹೇಳಿಕೊಂಡರು. ಸ್ವಾಮಿಗಳವರ ಅನುಗ್ರಹದಿಂದ ಅವರು ಕೆಲವು ದಿನಗಳಲ್ಲಿಯೇ ಗುಣಮುಖರಾದರು. ಇದರಿಂದ ಪ್ರಸನ್ನರಾದ ಮಹಾರಾಜರು ಶ್ರೀ ಶಿವಬಸವಸ್ವಾಮಿಗಳವರು ಅನುಷ್ಠಾನದಲ್ಲಿ ನಿರತರಾಗಿದ್ದ ಗವಿ ಇದ್ದ ಸ್ಥಳದಲ್ಲೇ ಅವರಿಗಾಗಿ ಮಠವೊಂದನ್ನು ನಿರ್ಮಿಸಿ ಅಲ್ಲಿಯೇ ನೆಲೆಸುವಂತೆ ಕೋರಿಕೊಂಡರು. ಅಲ್ಲಿ ಐದು ಪ್ರತ್ಮೇಕ ಗವಿಗಳಿದ್ದುದರಿಂದ ಹಾಗೂ ಮಹಾರಾಜರು ಆ ಮಠವನ್ನು ನಿರ್ಮಿಸಿ ಕೊಟ್ಟದ್ದರಿಂದ ಅದು ಮುಂದೆ ಅರಮನೆಯ ಶ್ರೀ ಪಂಚಗವಿ ಮಠವೆಂಬ ಹೆಸರು ಪಡೆಯಿತು. ಶ್ರೀ ಶಿವಬಸವಸ್ವಾಮಿಗಳವರ ನಂತರದಲ್ಲಿ ಅಸಂಖ್ಯ ಭಕ್ತಾದಿಗಳನ್ನು ಹೊಂದಿ ಶ್ರೀಮಠದ ಪೀಠಾಧಿಪತಿಗಳ ಪರಂಪರೆ ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ತಪ್ಪದೆ ಶ್ರೀ ಗೌರೀಶಂಕರ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವನ್ನು ಭಕ್ತಾದಿಗಳು ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾರೆ.

ಶ್ರೀ ಗೌರೀಶಂಕರಸ್ವಾಮಿಗಳ ವಿದ್ವತ್ತು ಅಪಾರ, ಅನುಭವ ಅತಿಗಂಭೀರ, ವರ್ಣನಾವೈಖರಿ ನಿತಾಂತಸುಂದರ, ಇವರ ಈ ವಿದ್ವತ್ತು ಅನುಭವವರ್ಣನ ಸಾಮರ್ಥ್ಯಗಳ ಅಂಶಮಾತ್ರದಿಂದಲೇ ಹತ್ತಾರು ಕಾವ್ಕಗಳು ಅರಳಲು ಸಾಧ್ಯ. ಅಂತಹವರು ನಮಗೀಗ ಬಿಟ್ಟುಹೋಗಿರುವುದು ಇದೊಂದೇ ಕಾವೃವನ್ನು, ಅದೂ ಅಪೂರ್ಣವಾಗಿ. ಅವರ ಈ ಕಾವ್ಯದ ಅಪೂರ್ಣತೆಯನ್ನು ಅವರ ತುಂಬು ಬಾಳು ತುಂಬಿಕೊಟ್ಟೀತು. ಅವರ ಸರಳ ಸ್ವಭಾವ, ಸರಸ ಪ್ರವೃತ್ತಿ, ದೀನದಲಿತರ ಕುರಿತು ಅವರಿಗಿದ್ದ ದಯಾರ್ದ್ರಚಿತ್ತ ಇವೆಲ್ಲವೂ ಸೇರಿದ ಅವರ ಬದುಕು ವೈರಾಗ್ಯಕ್ಕೆ ಬರೆದ ಒಂದು ಜೀವಂತ ಟಿಪ್ಪಣಿಯಂತಿತ್ತು. ಯಾವುದನ್ನೂ ಅತಿಯಾಗಿ ಪ್ರೀತಿಸುವುದು ಅವರ ಜಾಯಮಾನಕ್ಕೆ ಒಗ್ಗದ ಮಾತು. ನಿಂತೆಡೆಯೇ ಬಹುಕಾಲ ನಿಲ್ಲುವುದೂ ಅಭಿಮಾನ, ಅಹಂಕಾರ, ಮಮಕಾರಗಳು ಸುಳಿದೆಗೆದು ಬೆಳೆಯಲು ಅವಕಾಶ ಮಾಡಿಕೊಡುವುದೆಂಬ ಪರಿವ್ರಾಜಕ ಪ್ರವೃತ್ತಿಯ ಅವರು ಹಿಡಿದ ಕಾರ್ಯವನ್ನು ಪೂರೈಸಲೇಬೇಕೆಂಬ ಸಂಕಲ್ಪಕ್ಕೆ ಬಹುಶಃ ದಾಸರಾಗಲಿಚ್ಛಿಸಲಿಲ್ಲ.

ಗೌರೀಶಂಕರಸ್ವಾಮಿಗಳವರು ಇಂಗ್ಲಿಷ್‌, ಸಂಸ್ಕೃತ, ಬಂಗಾಳಿ, ಹಿಂದಿ ಇನ್ನಿತರ ಹಲವು ಭಾಷೆಗಳಲ್ಲಿ ಪ್ರಾವೀಣ್ಶತೆಯನ್ನು ಪಡೆದುಕೊಂಡಿದ್ದರು. ಅವರು ಕನ್ನಡದಲ್ಲಿ ಕಾವ್ಯವನ್ನು ಬರೆದಿರುವುದು ಭಾಷೆಯ ಬಗ್ಗೆ ಅವರಿಗಿದ್ದ ಪ್ರೇಮವನ್ನು ಪ್ರಕಟಿಸುತ್ತದೆ. ಅಕ್ಕಮಾದೇವಿ. ಕಾವ್ಯವು ಸತ್ಯಶಿವಸುಂದರದತ್ತ ನಡೆವ ಸಾಧಕ ಪಥಿಕರ ಪಾಥೇಯವಾಗಲಿ, ವಿಷಯ ವಿಷಮಸಂಸಾರ ಸಾಗರದಲ್ಲಿ ನೆಲೆದಪ್ಪಿ ತಲ್ಲಣಿಸುವ ಚೇತನಗಳಿಗೆ ಉಪಾದೇಯವಾಗಿದೆ.

ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು

ಅಕ್ಕಮಹಾದೇವಿ ಜಗತ್ತಿನ ಮಹಿಳಾ ಸಂತಸಮೂಹದ ಅನರ್ಫ್ಯ ರತ್ನ. ಅಕ್ಕನ. ಜೀವನ, ಅವರ ಅಮೃತವಾಣಿ ಇವು ಲೋಕೋತ್ತರವಾದುವು. ಈ ಮಹಿಮಳ ಜೀವನವನ್ನು, ತತ್ತ್ವವನ್ನು ಓದಿದಷ್ಟೂ ಆನಂದವಾಗುತ್ತದೆ. ಈ ದಿವೃಚರಿತ್ರೆಯನ್ನು ಇಪ್ಪತ್ತನೆಯ ಶತಮಾನದಲ್ಲಿ ಚಂಪೂಕಾವೃವಾಗಿ ರಚಿಸಿರುವುದು ಸಾಮಾನ್ಯ ಕೆಲಸವಲ್ಲ. ಅಸಾಧಾರಣ ಪ್ರತಿಭೆ, ಪಾಂಡಿತ್ಯಗಳಿಂದ ತುಂಬಿದ ವ್ಯಕ್ತಿಗಳಿಗಲ್ಲದೆ ಸಾಧ್ಯವಿಲ್ಲ. ಶ್ರೀ ನಿ.ಪ್ರ.ಸ್ವ. ಗೌರೀಶಂಕರ ಮಹಾಸ್ವಾಮಿಗಳವರು ಅದ್ವಿತೀಯ ಪಂಡಿತರು ಮತ್ತು ಅನುಭಾವಿಗಳು. ನಮ್ಮ ಅರಮನೆಯ ಪಂಚಗವಿ ಮಠಾಧ್ಯಕ್ಷರಾಗಿದ್ದು ಮಹಾಕೃತಿಯೊಂದನ್ನು ಕನ್ನಡ ಸಾರಸ್ವತ ಭಂಡಾರಕ್ಕೆ ಅರ್ಪಿಸುವರೆಂಬ ವಿಷಯವನ್ನು ಕೇಳಿ ಸಂತೋಷಪಟ್ಟಿದ್ದೆವು. ಅಲ್ಲದೆ ಅನೇಕ ಕೃತಿರತ್ನಗಳನ್ನು ನಿರೀಕ್ಷಿ: ಸಿದ್ದೆವು. ಶಿವಾದ್ವೈತಪರ ಗೀತಾಭಾಷ್ಮ ಪ್ರಕಟವಾಗುವುದೆಂದು ಆಶಿಸಿದ್ದೆವು. ಅದರೆ ವಿಧಿಲೀಲೆ ಬೇರೆಯಾಯಿತು. ಈ ಮಹಾಕಾವ್ಯ ಮುಗಿಯುವ ಮುನ್ನವೇ ಅವರ ಐಹಿಕ ಜೀವನ ಮುಗಿಯಿತು. ಅಪೂರ್ಣವಾದ ಈ ಕಾವೃದಲ್ಲಿ ಇರುವಷ್ಟು ಭಾಗವೇ ಪ್ರಕಟವಾಗುತ್ತಿರುವುದೂ ಕನ್ನಡಿಗರ ಭಾಗ್ಯ. ಈ ಕಾವ್ಯ ಅವರ ಪ್ರತಿಭೆಯ ರಸಗನ್ನಡಿಯಾಗಿದೆ. ಜಗದ್ಗುರು ಶ್ರೀ ಶಿವರಾತ್ರೀಶ್ವರ ಮ‍ಹಾವಿದ್ಕಾಪೀಠದ ಸಂಸ್ಥಾಪಕರಾದ ಜಗದ್ಗುರು ಶ್ರೀ ಶಿವರಾತ್ರಿ ರಾಜಂ‍‍ದ್ರ ಮಹಾಸ್ವಾಮಿಗಳು ಈ ಕೃತಿಯನ್ನು ಪ್ರಕಟಿಸಿ ಕನ್ನಡಿಗರಿಗೆ ಮಹದುಪಕಾರವನ್ನೆಸಗಿದ್ದಾರೆ.

ಶ್ರೀ ಜಯಚಾಮರಾಜ ಒಡೆಯರ್‌

ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

%d bloggers like this: