ಚನ್ನಪ್ಪ ಎರೇಸೀಮೆ

ಜಗಜ್ಯೋತಿ ಬಸವಣ್ಣನವರ ಕ್ರಾಂತಿಯ ಕಹಳೆ

ಶ್ರೀಕಂಠೇಶ್ವರ ಪ್ರೆಸ್ ಮತ್ತು ಬುಕ್ ಡಿಪೋ

೧೨ ನೆಯ ಶತಮಾನದಲ್ಲಿ ದಕ್ಷಿಣಭಾರತದ ಚಾಲುಕ್ಯ ಚಕ್ರವರ್ತಿಗಳ ರಾಜಧಾನಿಯೆನಿಸಿ ಅಂತರ ರಾಷ್ಟ್ರೀಯ ಮಹಾನಗರದ ಕೀರ್ತಿಗೆ ಭಾಜನವಾಗಿದ್ದ ಕಲ್ಯಾಣದಲ್ಲಿ ಜಗತ್ಪ್ರಸಿದ್ಧ ಕ್ರಾಂತಿಯೊಂದು ನಡೆದ ಅಂಶ ಸರ್ವವೇದ್ಯ. ತತ್ತ್ವಜ್ಞಾನ, ಶಿವಾನುಭವ ವಿದ್ಯೆ, ಅನುಭವ: ಸಂಪಾದನೆ ಸಾಮಾಜಿಕ ನಡೆನುಡಿಗಳರೀತಿ ನೀತಿಗಳ ಬಗೆಗೆ ತನ್ನದೇ ಆದ ವೈಶಿಷ್ಟವನ್ನು ದೇಶದ. ಮೂಲೆ ಮೂಲೆಗಳಿಂದ ಆಗಮಿಸಿ ಸೇರುವೆಗೊಂಡ ಶಿವಶರಣ ಸಮೂಹ ಬಯಲಿಗೆಳೆದಿದೆ. ವಿಶ್ವದಲ್ಲಿ ಅಡಗಿರುವ ವೈಚಿತ್ರ್ಯವನ್ನು ಸಿಂಡಪ್ರಪಂಚದಿಂದ ಅರಿತು ಪಿಂಡದಿಂದೆಲೇ ಅದನ್ನು ಅಳವಡಿಸಿ ಜಯ ಅಖಂಡದ ಆನಂದದಲ್ಲಿ ನಿಬ್ಬೆರಗುಗೊಳ್ಳುವಲ್ಲಿ ಶರಣರು ನಡೆದ ದಾರಿ, ನುಡಿದೆ ನುಡಿ, ಮಾಡಿದಕಾರ್ಯ ಅನ್ಯಾದೃಶವಾದುದು. ಅವರು ಕೇವಲ ಸಾಹಿತಿಗಳಲ್ಲ; ಸತ್ಯಾನ್ಟೆ ಷಿಗಳು. ಸತ್ಯದ ಸ್ವರೂಪದರ್ಶನಕ್ಕಾಗಿ ಅವರೆಸಗಿದ ಹೋರಾಟದಲ್ಲಿ, ಹೊಂದಿದ ದೇವೋನ್ಮಾದದ ನಿಬ್ಬೆರಗಿನಲ್ಲಿ ಹೊರಹೊಮ್ಮಿದ ನುಡಿಗಡಣವೇ ವಚನಸಾಹಿತ್ಯ. ಶರಣರ ಸಮಾಗ್ರವಚನ ಸಾಹಿತ್ಯವನ್ನು. ಕೂಲಂಕಷವಾಗಿ ಅವಲೋಕಿಸಿದಾಗ ಅವರ ಆದ್ಭುತ ಕ್ರಾಂತಿಯ ಉದ್ದೇಶ ಅರ್ಥವಾಗದಿರದು. ಶಿವಾಗಮ, ಉಪನಿಷತ್ತು, ವೇದಗಳೇ ಮೊದಲಾದ ಪ್ರಾಚೀನ ದರ್ಶನಗ್ರಂಥಗಳ ಅಭಿಪ್ರಾಯಗಳಿಗಿಂತಲೂ
ಇವರ ವಿಚಾರಧಾರೆ ಬಹು ಮುಂದೆ ಹೋಗಿ ನಿಂತಿದೆ ಎಂಬುದು ವಿದ್ವಾಂಸರ ಅಭಿಪ್ರಾಯ.

%d bloggers like this: