ಚನ್ನಪ್ಪ ಎರೇಸೀಮೆ

ನನ್ನ ಕಥೆ

ಆತ್ಮ ಕಥೆ‍

ಪ್ರಕಾಶಕರು: ‍ಪಂ. ಚನ್ನಪ್ಪ ‍ಎರೇಸೀಮೆ ಅಭಿನಂದನಾ ಸಮಿತಿ 

ಲೇಖಕರ ಮಾತು

ಬಾಳಸಂಧ್ಯೆಯಲ್ಲಿ. ನಾನು ಸಾಗಿ ಬಂದ ದಾರಿಯನ್ನೊಮ್ಮೆ ತಿರುಗಿ ನೋಡಿದಾಗ ಕಂಡ ನೆನಪಿನ ದಿಬ್ಬಣಗಳ ಸಾಲು ಈ “ನನ್ನ ಕಥೆ ‘ಯಲ್ಲಿವೆ. ಅವುಗಳಲ್ಲಿ ಕೆಲವನ್ನು ನನ್ನ ಆತ್ಮೀಯರ ಮುಂದೆ ಹೇಳಿದಾಗ ಅವರು ಅವು ತೀರಾ ಅಪರೂಪದವು. ಸ್ವಾರಸ್ಯಕರವಾದವು; ಅವನ್ನು ನೀವು ಬರೆದಿಡಬೇಕು ಎಂದು ಒತ್ತಾಯಮಾಡಿದರು. ನಾನು ಅವನ್ನು ಬರೆಯುತ್ತಾ ಹೋದಂತೆ ಅವು ಬೆಳೆಯುತ್ತಾ ಹೋದವು. 1952ರವರೆಗೆ ಹಾಗೆ ಬರೆದು ನಿಲ್ಲಿಸಿದ್ದೆ.

ಈಗ ಅಭಿನಂದನ ಸಮಿತಿಯವರು ಅದನ್ನು ಪ್ರಕಟಿಸಲು ಸಂಕಲ್ಪಿಸಿದ್ದರಿಂದ ಮುಂದಿನ ಕಥೆಯನ್ನು ಸಂಕ್ಷಿಪ್ರಗೊಳಿಸಿ ಮುಗಿಸಿ ಕೊಟ್ಟಿದ್ದೇನೆ. ಈ ಕೃತಿ ಹೊರಬರಲು ಕಾರಣರಾದ ಎಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ.

“ನನ್ನ ಕಥೆ’ಯ ಹಸ್ತಪ್ರತಿಯನ್ನು ಓರಣಗೊಳಿಸಿ, ಕರಡನ್ನು ತಿದ್ದಿ ಈ ಕೃತಿ ಇಷ್ಟರ ಮಟ್ಟಿಗೆ ಹೊರಬರಲು ಕಾರಣ ಆತ್ಮೀಯರಾದ ಶ್ರೀ ಟಿ. ಆರ್‌. ಮಹಾದೇವಯ್ಯನವರ ಶ್ರದ್ಧಾಸಕ್ತಿಗಳು. ಅವರಿಗೆ ನನ್ನ ವಿಶೇಷ ಧನ್ಯವಾದಗಳು ಸಲ್ಲುತ್ತವೆ.

“ನನ್ನ ಕಥೆ ‘ಯಲ್ಲಿ ನನ್ನ ಮನದಲ್ಲಿ ಅಚ್ಚೊತ್ತಿದ ಅನೇಕ ವಿಷಯಗಳು ಅಚ್ಚಾಗಿವೆ. ಅವು ಅಂದಿನ ಗ್ರಾಮೀಣ ಜೀವನದ ಚರಿತ್ರೆಗಳೂ ಆಗಿವೆ. ಕನ್ನಡ ಓದುಗರಿಗೆ. ಆ ನನ್ನ ನೆನಪುಗಳು ಹಿಡಿಸಿದರೆ ನಾನು ಕೃತಾರ್ಥ.

 

– ಚನ್ನಪ್ಪ ಎರೇಸೀಮೆ, 3-3-1999, ಬೆಂಗಳೂ‍ರು

ಪ್ರಕಾಶಕರ ನುಡಿ

ಪಂಡಿತ ಚೆನ್ನಪ್ಪ ಎರೇಸೀಮೆಯವರು ನಮ್ಮನಾಡಿನ ಶ್ರೇಷ್ಠವಿದ್ವಾಂಸರಲ್ಹೊಬ್ಬರು; ಆದರ್ಶ ಶಿಕ್ಷಕರು. ಮೇಲಾಗಿ ಪ್ರವಚನ ಮತ್ತು ಕಥಾಕಾಲಕ್ಷೇಪಗಳ ಮೂಲಕ ಜನಮನವನ್ನು ಸೂರೆಗೊಂಡವರು. ನಾಡು-ನುಡಿಯ ಸೇವೆಯಲ್ಲಿ ಬಾಳು ಸವೆಸಿದವರು. ಅವರ ಸಾಧನೆಗಳನ್ನು ಪರಿಗಣಿಸಿ ಅವರನ್ನು ಯುಕ್ತರೀತಿಯಲ್ಲಿ ಅಭಿನಂದಿಸಬೇಕೆಂದು ಅವರ ಅಭಿಮಾನಿಗಳು, ಮಿತ್ರರು, ಶಿಷ್ಕರು ತೀರ್ಮಾನಿಸಿ ಒಂದು ಅಭಿನಂದನ ಸಮಿತಿಯನ್ನು ರಚಿಸಿ ಕಾರ್ಯೊನುಖರಾದರು. ಶಿಕ್ಷಣತತ್ತ್ವಗಳನ್ನು ಕುರಿತ ಒಂದು ಅಭಿನಂದನ ಗ್ರಂಥವನ್ನು ಅವರಿಗೆ ಸಮರ್ಪಿಸಲು ತೀರ್ಮಾನಿಸಲಾಯಿತು.

ಅದರಂತೆ ಅವರ ಜೀವನಚರಿತ್ರೆಯನ್ನು ಬರೆಸಿದರೆ ಅದನ್ನು ಪ್ರಕಟಿಸುವುದಾಗಿ ಬೆಂಗಳೂರಿನ ಸದಾಶಿವ ಹಿ ಕಂಪನಿಯ ಶ್ರೀ ಎಂ. ಸದಾಶಿವಪ್ಪನವರು ತಿಳಿಸಿದರು. ಪಂ. ಚೆನ್ನಪ್ಪನವರು ತಮ್ಮ ಆತಚರಿತ್ರೆಯನ್ನು ಬರೆದಿರುವುದಾಗಿಯೂ, ಈ ಸಂದರ್ಭದಲ್ಲಿ ಅದನ್ನೇ ಪ್ರಕಟಿಸುವುದು ಉಚಿತವಾದುದೆಂದು ಶ್ರೀ ಟಿ.ಆರ್‌. ಮಹಾದೇವಯ್ಕನವರು ಅಭಿಪ್ರಾಯ ಪಟ್ಟರು. ಅಭಿನಂದನ ಸಮಿತಿ ಅದಕ್ಕೆ ಒಪ್ಪಿಗೆ ನೀಡಿತು. ಪ್ರಕಟಣೆಗೆ ಮತ್ತಷ್ಟು ಸಂಪನೂಲವನ್ನು ದೊರಕಿಸಿಕೊಳ್ಳುವ ಪ್ರಯತ್ನ ಮಾಡಿತು. ಕೆಲವು ಮಠಾಧೀಶರು, ಸಂಸ್ಥೆಗಳವರು ಹಾಗೂ ಅಭಿಮಾನಿಗಳು ನೆರವು ನೀಡಿದರು. ಹೀಗಾಗಿ ಎರೇಸೀಮೆಯವರ ನನ್ನ ಕಥೆ’ ಹೊರಬರಲು ಸಾಧ್ಯವಾಯಿತು. ಇದಕ್ಕೆ ಕಾರಣರಾದ ಎಲ್ಲ ಪೂಜ್ಯರಿಗೆ, ಸಹೃದಯಿ ಬಂಧುಗಳಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಪ್ರಕಟಣೆಗೆ ಹಸ್ತಪ್ರತಿ ನೀಡಿದ. ಪಂ. ಚೆನ್ನಪ್ಪ ಎರೇಸೀಮೆಯವರಿಗೆ ಧನ್ಯವಾದಗಳು.

ಅಭಿನಂದನ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ. ಎಸ್‌. ಮುದ್ದಪ್ಪನವರು,
ಶ್ರೀ ಬಿ. ಎಸ್‌. ಶಿವಣ್ಣನವರು, ಕೋಶಾಧ್ಯಕ್ಷರಾದ ಶ್ರೀ ಎಂ. ಶ್ರೀಕಂಠಾರಾಧ್ಯರು, ಪ್ರಧಾನ ಕಾರ್ಯದರ್ಶಿಗಳಾದ ಶೀ ಟಿ. ಆರ್‌. ಮಹಾದೇವಯ್ಯನವರು ಮತ್ತುಇತರ ಸದಸ್ಯರೆಲ್ಲರಿಗೂ, ಈ ಬೃಹತ್‌ ಕೃತಿಯನ್ನು ಶ್ರದ್ಧೆಯಿಂದ ಅಚ್ಚುಮಾಡಿಕೊಟ್ಟ ಗೀತಾಂಜಲಿ ಪ್ರೆಸ್‌ನ ಶ್ರೀ ಜಿ. ನಾಗಸುಂದರ್‌ ಅವರಿಗೂ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ. ಕನ್ನಡ ಜನತೆ ಪ್ರಾಮಾಣಿಕ ಹಾಗೂ ನಿಸ್ಟೃಹ ಶಿಕ್ಷಕರ, ಸಂಸ್ಕೃತಿ ಸಂಪನ್ನ ವಿದ್ವಾಂಸರ ಈ ನೆನಪಿನ ರಸಾಯನವನ್ನು ಸವಿಯುವರೆಂಬ ವಿಶ್ವಾಸದಲ್ಲಿ ಇದನ್ನು ಅವರ ಕೈಯಲ್ಲಿಡುತ್ತಿದ್ದೇವೆ. ಅವರು ಇದನ್ನು ಆದರಿಸಲಿ.‍

ಬೆಂಗಳೂರು ಡಿ.ಎಂ. ಚಂದ್ರಶೇಖರ್‌
3-3-1999 ಅಧ್ಯಕ್ಷ

ಪಂ. ಚೆನ್ನಪ್ಪ ಎರೇಸೀಮೆ ಅಭಿನಂದನ ಸಮಿತಿ

ಪಂ. ಚೆನ್ನಪ್ಪ ಎರೇಸೀಮೆ ಅಭಿನಂದನ ಸಮಿತಿ

ಅಧ್ಯಕ್ಷರು: ನ್ಯಾಯಮೂರ್ತಿ ಶ್ರೀ ಡಿ.ಎಂ. ಚಂದ್ರಶೇಖರ್‌

ಉಪಾಧ್ಯಕ್ಷರು : ಶ್ರೀ ಬಿ. ಎಸ್‌. ಮುದ್ದಪ್ಪ, ಶ್ರೀ:ಬಿ. ಎಸ್‌. ಶಿವಣ್ಣ

ಕೋಶಾಧ್ಯಕ್ಷರು: ಶ್ರೀ ಎಂ. ಶ್ರೀಕಂಠ ರುದ್ರಾರಾಧ್ಯ

ಪ್ರಧಾನ ಕಾರ್ಯದರ್ಶಿ : ಶ್ರೀ ಟಿ. ಆರ್‌. ಮಹಾದೇವಯ್ಯ

ಪುಸ್ತಕದಿಂದ

ಪಟು ಕೋಪಾಟೋಪ ಬದ್ಧಬ್ಛಕುಟಿ, ವಿಚಳಿತ ಶಶು;ಘುರ್ಮಾಂಬು ಭಾಸ್ವನ್ನಿಟಿಲಂ ಶೋಣಾಕ್ಷಿಕೋಣಂ;
ಪೆದೆಯನೆಳೆದು ಗಾಂಢೀವದೊಳ್‌ ತೊಟ್ಟು ರೌದ್ರೋತ್ಕಟ ವೃತ್ತಂ;
ಜ್ಯಾರವಂಗೈದು ಅಡಸಿ ಪಿಡಿದು ನಿಂದಿರ್ದು ಶಾಕಾಸ್ತ್ರಮಂ
ಸಂಘಟಿಸುತ್ತುಂ ಮಾಣದೆಚ್ಚಂ ಕಪಟಶಬರನಂ ಕೊಳ್‌
ಎನುತ್ತ ಉಣ್ಮಿ ಪಾರ್ಥಂ”

– ಈ ಪದ್ಯವನ್ನು ಈ ರೀತಿ ಗದ್ಯದಂತೆ ಛೇದಮಾಡಿ ಹೇಳಿದಾಗಂತೂ ಭಲೇ!
ಪಾರ್ಥ ಎಂದು ಉದ್ಗಾರ ಮಾಡಿದವರು ಹಲವರು. ಕೊನೆಯಲ್ಲಿ ಅರ್ಜುನ ಸೋತು ಬೇಡನನ್ನು ಶಿವನೇ ಈ ರೂಪದಲ್ಲಿ ಬಂದಿರುವನೆಂಬುದು ಖಚಿತಗೊಂಡೊಡನೆ,

ಅನವದ್ಯನೋಳ್‌, ಅಪ್ರತಿಮನೋಳ್‌, ಅನಘನೋಳ್‌
ಆದ್ಯಂತ ಶೂನ್ಯನೊಳ್‌, ಸಕಲ ಜಗಜ್ಜನಕನೊಳ್‌
ಅಭ್ಯರ್ಹಿತ ಚೇತನಗತನೊಳ್‌
ಇದಿರ್ಚಿ ಧುರದೊಳೆಚ್ಚಾಡಿದೆನೇ?
ಪರಮೈಶ್ವರ್ಯಾಸ್ಪದನೊಳ್‌
ಪರಿಪೂರ್ಣ, ಪರಪ್ರಕಾಶನೊಳ್‌, ಪಶುಪತಿಯೊಳ್‌
ಪರಶಕ್ತಿಯುಕ್ತನೊಳ್‌ ಪರತರ ಮಹಿಮನೊಳ್‌
ಆಂತು ಇದಿರ್ಚುತ ಎಚ್ಚಾಡಿದೆನೇ?
ತಿಳಿದೆನೆ ಶಂಭುವೆಂದು ಬಹುಬಾಣದಿನೆಚ್ಚೊಡೆ ತಾಗದಂದು?
ತಿಳಿದೆನೆ ದಿವ್ಯಮಾರ್ಗಣದಿನಾನಿಸೆ ತಳ್ವದೆ ನುಂಗಿದಂದು?
ತಿಳಿದೆನೆ ಕೆಯ್ಯ ಚಾಪಮನ್‌ ಅಡಾಯುಧಮಂ ಸೆಳೆದು ಈಳ್ದುಕೊಂಡೊಡಂ?
ಅಕ್ಕಟ ತಿಳಿವೊಳಸಾರ್ದುದು ಪುರಾಕೃತ ಕರ್ಮದ ಪೆರ್ಮೆ ಎಂತುಟೊ!!

– ಈ ಮಾತುಗಳನ್ನು ಹೇಳಿದಾಗ ಶಂಕರಭಟ್ಟರು ಸ್ಪಷ್ಟವಾಗಿ ಅಯ್ಯೋ! ಅಯ್ಯೋ! ಅನ್ನುತ್ತ ಕಣ್ಣೊರಿಸಿಕೊಂಡದ್ದು ನೋಡಿದೆ. ಅನೇಕರು ಆಗ ಕಣ್ಣೊರಸಿಕೊಂಡು ಆಹಾ! ಎಂದರು. ಅವರೆಲ್ಲ ಕಥೆಯ ಈ ಶಾಂತರಸಕ್ಕೆ ಸ್ಪಂದಿಸಿ ಆಸ್ಪಾದನೆ ಮಾಡಿ  ಸಂತೋಷಗೊಂಡದ್ದು ನನ್ನನ್ನು ಪುಳ‍ಕಿತ ಗಾತ್ರನನ್ನಾಗಿಸಿತು.

– ಚನ್ನಪ್ಪ ಎರೇಸೀಮೆ

{

ಟಿ. ಆರ್‌. ಮಹಾದೇವಯ್ಯ ಅವರ ಬೆನ್ನುಡಿ

ಮನುಷ್ಯನ ಭಾವಕೋಶ ಬಹುದೊಡ್ಡ ಕಣಜ. ಇದು ಹುಟ್ಟಿದಂದಿನಿಂದ ಸಾಯುವವರೆಗೆ ಸಂಸ್ಕಾರಗಳನ್ನು ತನ್ನಲ್ಲಿ ತುಂಬುತ್ತಲೂ, ಕೆಲವನ್ನು ಸ್ಥಿರೀಕರಿಸುತ್ತಲೂ ಇರುತ್ತದೆ. ಇಲ್ಲಿ ಸಂಗ್ರಹವಾಗಿರುವ ಶಬ್ದಚಿತ್ರ, ವ್ಯಕ್ತಿಚಿತ್ರ, ದೇಶ, ಕಾಲ, ಜನಜೀವನ, ಸಿಹಿಕಹಿ, ಸುಖದುಃಖ, ಆಮೋದ ಪ್ರಮೋದ, ಸುಳ್ಳು, ಕಳವು ಹಾದರ, ಪುಣ್ಯ ಪಾಪ ಮೊದಲಾದ ಅನುಭವಗಳನ್ನು ಸಂಸ್ಕಾರರೂಪವಾಗಿ ಹಿಡಿದಿಟ್ಟು. ಬಿಡುತ್ತದೆ. ಸನ್ನಿವೇಶ ಬಂದಾಗ ಆಯಾಯ ಭೂತಗಳನ್ನು ಹೊರಹಾಕುತ್ತವೆ. ಭಾವದಲ್ಲಿ ಸಂಗ್ರಹವಾದ ಸಂಸ್ಕಾರಗಳೇ ಬಹುಮಟ್ಟಿಗೆ ಸ್ವಭಾವಗಳಾಗಿ ಮಾನವನನ್ನು ರೂಪಿಸುತ್ತವೆ.”

– ಇದು ಎರೇಸೀಮೆಯವರ ಜ್ಞಾನಾನುಭವಸಿಂಧುವಿನ ಒಂದು ಬಿಂದು.

ಪಂ. ಚಿನ್ನಪ್ಪನವರು ತಮ್ಮ ನೆನಪಿನ ಗಣಿಯಿಂದ ಅಗೆದು ತೆಗೆದ ಅನರ್ಫ್ಯ ರತ್ನಗಳು ಇಲ್ಲಿವೆ. ಸ್ವಾರಸ್ಯವೆಂದರೆ ಅವರ ನಿರೂಪಣೆಯಲ್ಲಿ ನಮ್ಮನಾಡಿನ ಶೈಕ್ಷಣಿಕ ಹಾಗೂ ಸಾಮಾಜಿಕ ಇತಿಹಾಸದ ಪುಟಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಸಾಹಿತ್ಯದ ಬಾಯಿಗೆ ಸಿಕ್ಕದ ಅನೇಕ ಅಮೂಲ್ಯವಾದ ಜೀವನಶ್ರದ್ಧೆಯ, ಹೃದಯಶ್ರೀಮಂತಿಕೆಯ ವ್ಯಕ್ತಿಗಳ ಪರಿಚಯ ಇಲ್ಲಿ ಸಾಲುಗೊಂಡಿವೆ. ಹಿಂದಿನ ನಮ್ಮ ಗ್ರಾಮೀಣರ ಬದುಕಿನ ರಸಸ್ಥಾನಗಳು ಇಲ್ಲಿ ತೆರೆದುಕೊಂಡಿವೆ.

ಒಂಭತ್ತು ರೂ. ಪಗಾರದ ಒಬ್ಬ ಗಾಂವಠೀ ಶಾಲೆಯ ಮೇಷ್ಟರು ಕಡುಬಡತನ, ನಿರುತ್ಸಾಹದ ಸನ್ನಿವೇಶದಲ್ಲೂ ಧೈರ್ಯ, ಸಾಹಸ, ಶ್ರದ್ಧಾಸಕ್ತಿಗಳಿಂದ ಹಂತಹಂತವಾಗಿ ಮೇಲೇರಿ ಹೈಸ್ಕೂಲು, ತರಬೇತಿ ಕಾಲೇಜುಗಳಲ್ಲಿ ಭಾಷಾಬೋಧಕರಾಗಿ ಕೀರ್ತಿಗಳಿಸುವ ಹಂತಕ್ಕೆ ಏರಿದ ವೀರಗಾಥೆ ಇದು. ಅದರ ಜೊತೆಗೆ ಇಂದು ನೋಡ ಸಿಕ್ಕದ ಪ್ರಾದೇಶಿಕ ಸೊಗಡಿನ ವಿಶಿಷ್ಟ ಜೀವನದರ್ಶನ ಇಲ್ಲಿ ಆಗುತ್ತದೆ. ಇಲ್ಲಿ ಬಳಸಿರುವ ಭಾಷೆಯೂ ಸಹ ವಿಶಿಷ್ಟ ಬನಿಯ ಉತ್ತರ ಕರ್ನಾಟಕದ್ದು. ಅವರ ನಿರೂಪಣಾಶೈಲಿ ಆಕರ್ಷಕ. ಅವರು ಓದುಗರೊಡನೆ ಸಂವಾದ ಮಾಡುತ್ತಾ ಕಥೆ ಹೇಳಿದ್ದಾರೆ.

ನವರತ್ನರಾಂ ಅವರ ‘ಕೆಲವು ನೆನಪುಗಳು’, ಎಂ. ಆರ್‌. ಶ್ರೀಯವರ “ರಂಗಣ್ಣನ ಕನಸಿನ ದಿನಗಳು’, ಕೆ.ಆರ್‌. ರಾಮಚಂದ್ರನ್‌ ಅವರ “ತಾಪೇದಾರಿ’ ಮೊದಲಾದ ವೃತ್ತಿಪರ ಅನುಭವ ಕಥನಗಳ ಶ್ರೇಣಿಗೆ ಪಂ. ಚೆನ್ನಪ್ಪ ಎರೇಸೀಮೆಯವರ “ನನ್ನ ಕಥೆ’ ಸೇರಿತು. ಇಂಥ ರಸಬುತ್ತಿಯನ್ನು ಕನ್ನಡಿಗರಿಗೆ ನೀಡಿದ ಪಂ. ಚೆನ್ನಪ್ಪ ಎರೇಸೀಮೆಯವರು ಅಭಿನಂದನಾರ್ಹರು.

%d bloggers like this: