ಸಂಪಾದಕ: ಟಿ. ಆರ್. ಮಹಾದೇವಯ್ಯ
ಚೆನ್ನ ಶಿಕ್ಷಣ ಸಿರಿ
ಪಂ. ಚನ್ನಪ್ಪ ಎರೇಸೀಮೆ ಗೌರವ ಗ್ರಂಥ
ಸಂಪಾದಕರ ನುಡಿ
ಇಂಥದೊಂದು ಮೌಲ್ಕದ ಕೃತಿ ರೂಪು ತಾಳಲು ಕಾರಣರಾದವರನ್ನು ನೆನೆಸುವುದು ನನ್ನ ಕರ್ತವೃವಾಗಿದೆ. ‘ಚೆನ್ನ ಶಿಕ್ಷಣ ಸಿರಿ’ ನಮ್ಮ ನಾಡಿನ ಹಿರಿಯ ಶಿಕ್ಷಕರೊಬ್ಬರಿಗೆ ಅರ್ಪಿಸುವ ಅಭಿನಂದನ ಗ್ರಂಥವೆಂಬ ಅಭಿಮಾನದಿಂದ, ಕೊಟ್ಟ ವಿಷಯದ ಮೇಲೆ ವಿಚಾರ ಪರಿಪ್ಲುತ ಲೇಖನಗಳನ್ನು ಬರೆದು ಕಳಿಸಿದ ಎಲ್ಲ ಲೇಖಕರಿಗೂ ಧನ್ಶವಾದಗಳು. ಸಂಪಾದಕ ಸಮಿತಿಯ ಅಧ್ಯಕ್ಷರಾದ ಪ್ರೊ. ಎಸ್.ಆರ್. ರೋಹಿಡೇಕರ್ ಅವರನ್ನು ಮತ್ತು ಉಳಿದ ಸದಸ್ಮರನ್ನು, ವಿಶೇಷವಾಗಿ ಪ್ರೊ. ಕೆ.ಎಚ್. ಉದ್ದಂಡಪ್ಪ ಮತ್ತು ಡಾ. ಡಿ.ಎಸ್. ಶಿವಾನಂದ ಅವರನ್ನು, ಅವರ ಮಾರ್ಗದರ್ಶನ ಹಾಗೂ ಸಲಹೆ-ಸೂಚನೆಗಳಿಗಾಗಿ ತುಂಬುಮನದಿಂದ ನೆನೆಯುತ್ತೇನೆ. ಈ ಗ್ರಂಥದ ಬಗ್ಗೆ ಆಸಕ್ತಿ ತೋರಿಸಿ ಸಹಕರಿಸಿದ ಶ್ರೀ ಬಿ.ಎಸ್. ಪರಮಶಿವಯ್ಯನವರಿಗೆ ನನ್ನ ಕೃತಜ್ಞತೆಗಳು ಸಲ್ಲಬೇಕು.
ಈ ಗ್ರಂಥದ ಪ್ರಕಟಣೆಗೆ ಉದಾರ ನೆರವು ನೀಡಿ ಆಶೀರ್ವದಿಸಿರುವ ಶ್ರೀಸಿದ್ಧಗಂಗಾ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ಟ್ರಾಮಿಗಳಿಗೆ ಪ್ರಣಾಮಗಳು. ಅಭಿನಂದನ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ.ಎಂ. ಚಂದ್ರಶೇಖರ್, ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಮುದ್ದಪ್ಪ, ಶ್ರೀ ಬಿ.ಎಸ್. ಶಿವಣ್ಣ, ಕೋಶಾಧ್ಯಕ್ಷರಾದ ಶ್ರೀ ಎಂ. ಶ್ರೀಕಂಠ ರುದ್ರಾರಾಧ್ಮ ಅವರ ಪ್ರೋತ್ಸಾಹ ಹಾಗೂ ಸಹಕಾರವನ್ನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ.
ಶ್ರೀ ಎರೇಸೀಮೆಯವರ ಮಿತ್ರರು, ಬಂಧುಗಳು ಅವರ ಅಭಿನಂದನೆ ಅರ್ಥಪೂರ್ಣವಾಗಲು ಹಲವಂದದಲ್ಲಿ ನೆರವಾಗಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು.
ಈ ಗ್ರಂಥವನ್ನು ಸುಂದರವಾಗಿ ಮುದ್ರಿಸಿಕೊಟ್ಟ ಅನುಭವಪ್ರಿಂಟರ್ಸ್ ಮಾಲೀಕರಾದ ಶ್ರೀ ಬಸವರಾಜ ಜಿಗಳೂರ ಅವರಿಗೆ ನಮ್ಮ ವಂದನೆಗಳು.
ಹಿರಿಯರಾದ ಶ್ರೀ ಚನ್ನಪ್ಪ ಎರೇಸೀಮೆಯವರಿಗೆ, ಅಭಿನಂದನೆಯ ಸಂದರ್ಭದಲ್ಲಿ, ಅವರ ವ್ಯಕ್ತಿತ್ವಕ್ಕೆ ತಕ್ಕುದಾದ ಸಾರಸ್ವತ ಕೊಡುಗೆಯನ್ನು ನೀಡಬೇಕೆಂಬ ಸಂಕಲ್ಪದಂತೆ ಈ ‘ಸಿರಿ’ಯನ್ನು ಅವರಿಗೆ ಅರ್ಪಿಸುತ್ತಿದ್ದೇವೆ. ಇದು ಅವರಿಗೆ ಪ್ರಿಯವಾಗಲಿ. ಶಿಕ್ಷಣ ತತ್ವಜಿಜ್ಞಾಸುಗಳು ಇದನ್ನು ಆದರಿಸಲಿ.
ದಿನಾಂಕ 20.3.1999
ಟಿ. ಆರ್. ಮಹಾದೇವಯ್ಯ
ಬೆಂಗಳೂರು ಸಂಪಾದಕ