ಚನ್ನಪ್ಪ ಎರೇಸೀಮೆ, ಎಂ. ಬಸವರಾಜು

ಕರ್ನಾಟಕದ ಮಹಾಸಂತ ಕನಕದಾಸ

ಪ್ರಕಾಶಕರು: ‍ಸಮಾಚಾರ ಮತ್ತು ಪ್ರಸಾರ ಮಂತ್ರಾಲಯ, ಭಾರತ ಸರ್ಕಾರ

ಪ್ರಕಾಶಕರ ಮಾತು

ದೇಶದಲ್ಲಿ ಭಕ್ತಿ ಮಾರ್ಗಕ್ಕೆ ಚಲನಕೊಟ್ಟ ಮಹಾಸಂತರಲ್ಲಿ ಕನ್ನಡನಾಡಿನಲ್ಲಿ
ಜನಿಸಿದ ಮಧ್ನಾಚಾರ್ಯರು ಪ್ರಮುಖರು. ತ್ರೀ ಮಧ್ವಾಚಾರ್ಯರು ತಮ್ಮ ಕೃತಿ
ಗಳಷ್ಟನ್ನೂ ಸಂಸ್ಕೃತ ಭಾಷೆಯಲ್ಲಿಯೇ ರಚಿಸಿದಾದಾಗ್ಯೂ ಅವರ ಶಿಷ್ಕರು ಪಂಡಿತ
ಪಾಮರರಿಗೂ ಸುಲಭವಾಗಿ ತಿಳಿಯುವಂತೆ ಆಧ್ಯಾತ್ಮಿಕ ವಿದ್ಯೆಯ ಕ್ಲಿಷ್ಟ ತತ್ತ್ವ
ಗಳನ್ನು ಪದ್ಕ, ದೇವರನಾಮ, ಸುಳಾದಿ, ಸುಪ್ವಾಲೆ, ತ್ರಿಪದಿ, ಕಂದ ವಚನ
ಈ ಮುತಾದವುಗಳ ರೂಪದಿಂದ ತಿಳಿಗನ್ನಡದಲ್ಲಿ ಉಪದೇಶಿಸಿ ಜನರು ಸನ್ಮಾರ್ಗ
ವನ್ನು ಹಿಡಿಯಲು ನೆರವಾದರು. ಇಂತಹವರನ್ನು ಹರಿದಾಸರೆಂದು ಕರೆಯುತ್ತಾರೆ.
ಈ ಹರಿದಾಸರಲ್ಲಿ ಕೆಲವರು ಸಾಂಪ್ರದಾಯಿಕ ಗ್ರಂಥಗಳನ್ನೂ ಹಿಂದೂ ಧರ್ಮದ
ತತ್ತ್ವ ಎಗಳನ್ನೊಳಗೊಂಡ ಗ್ರಂಥಗಳನ್ನೂ ರಚಿಸಿದ್ದಾರೆ. ಮತ್ತೆ ಕೆಲವರು ಯಾವ
ಭೇದವಿಲ್ಲದೆ ಎಲ್ಲ ಜನರಿಗಾಗಿ ಧಾರ್ಮಿಕ ಮತ್ತು ನೈತಿಕ ತತ್ತ್ವಗಳನ್ನು ಉಪ
ದೇಶಿಸಿದರು. ಇವರಲ್ಲಿ ಶ್ರೀ ಪಾದರಾಜರು, ವಾದಿರಾಜರು, ಪುರಂದರದಾಸರು,
ಕನಕದಾಸರು ಅತಿ ಮುಖ್ಯರಾದವರು. ಹರಿದಾಸರು ಬಹುಮಟ್ಟಿಗೆ ಬ್ರಾಹ್ಮಣರು.
ಹಿಂದುಳಿದ ಜನಾಂಗ (ಕುರುಬರು) ವೊಂದರಲ್ಲಿ ಜನಿಸಿದ ಕನಕದಾಸರು ಈ
ದಾಸವರ್ಗದಲ್ಲಿಯೇ ಶ್ರೇಷ್ಠಭಕ್ತರೆನಿಸಿದ್ದಾರೆ. ಇವರು ಕುಲ ಕುಲಗಳಲ್ಲಿನ ದ್ವೇಷ
ಭಾವನೆಯನ್ನು ಮುರಿಯಲೆತ್ನಿಸಿದರು, ಮೂಢಧರ್ಮವನ್ನಾ ಚರಿಸುತ್ತಿದ್ದವರನ್ನು
ಸನ್ಮಾರ್ಗಕ್ಕೆ ತರಲು ಪ್ರಯತ್ನಮಾಡಿದರು. ಇವರ ಭಕ್ತಿ ಗೀತೆಗಳು ಲೋಕಪ್ರಿಯ
ವಾಗಿವೆ. ಈ ಮಹಾಸಂತರ ಜೀವನ ಚರಿತ್ರೆಯನ್ನೂ ಪ್ರಕಾಶನ ವಿಭಾಗಕ್ಕಾಗಿ
ಶ್ರಿ ಚೆನ್ನಪ್ಪ ಎರೇಸೀಮೆ ಮತ್ತು ಶ್ರೀ ಎಂ. ಬಸವರಾಜು ಅವರು ಬರೆದಿರುವರು.
ಇದಕ್ಕಾಗಿ ಪ್ರಕಾಶನ ವಿಭಾಗವು ಶ್ರೀ ಎರೇಸೀಮೆ ಮತ್ತು ಶ್ರೀ ಬಸವರಾಜು
ಅವರಿಗೆ ಚಿರಯಣಿಯಾಗಿದೆ.

ಗ್ರಂಥಕರ್ತರ ನುಡಿ

ಕನ್ನಡ ನಾಡಿನ ಹರಿದಾಸರ ಪರಂಪರೆ ಬಹು ದೊಡ್ಡದು. ಆ ಪರಂಪರೆಯಲ್ಲಿ ಪುರಂದರದಾಸರ ಸ್ಮಾನ ಅತ್ಯಂತ ಮಿಗಿಲಾದುದು. ಪುರಂದರದಾಸರೊಡನೆಯೇ ಕೇಳಿಬರುವ ಇನ್ನೊಂದು ಬಹು ದೊಡ್ಡ ಹೆಸರು ಕನಕದಾಸರದು. ಪುರಂದರದಾಸರ ಕಿರಿಯ ಸಮಕಾಲೀನರಾಗಿ ಮಹಾವಿದ್ವಾಂಸರೂ, ಅಪರೋಕ್ಷಜ್ಞಾನಿಗಳೂ ಆಗಿದ್ದ ಸೋಸಲೆ ಮಠದ ವ್ಯಾಸರಾಯರಲ್ಲಿ ಇವರೀರ್ವರೂ ಕೆಲವು ಕಾಲ ತತ್ತ ಆಬೆಂತನೆ ಮಾಡಿದರು. ವಿಜಯನಗರದ ಉಚ್ಛ್ರಾಯ ಸ್ಥಿತಿಯಲ್ಲಿ ಅದರೊಡನೆ ಸಂಬಂಧವಿಟ್ಟುಕೊಂಡವರು. ಪುರಂದರದಾಸರು ತಮ್ಮ ಐಶ್ವರ್ಯವನ್ನೆಲ್ಲ ದಾನಮಾಡಿ, ಹರಿದಾಸರಾಗಿ ಊರೂರುಗಳನ್ನು ಅಲಿದಂತೆ ಕನಕದಾಸರೂ ತಮಗಿದ್ದ ಅಧಿಕಾರ ಐಶ್ವರರ್ಯಾದಿಗಳನ್ನು ತಿರಸ್ಕರಿಸಿ, ಕನ್ನಡನಾಡಿನಲ್ಲಿ, ಆಂಧ್ರದಲ್ಲಿ ಗಾಳಿಯಂತೆ ಸುಳಿದವರು. ತಮ್ಮ ಅನುಭವ ಅನಿಸಿಕೆಗಳನ್ನು ಹಾಡುಗಳ ಮೂಲಕ ಬಿತ್ತರಿಸಿದವರು. ಮಹಾತ್ಮ್ಯೆಗಳನ್ನು ತೋರಿದವರು. ಆದರೆ ದುರ್ದೈವದಿಂದ ಇಂಥ ಮಹಾವಿಭೂತಿ ಪುರುಷರಾಗಿದ್ರ ಕನಕದಾಸರ ಜೀವನವೃತ್ತವನ್ನು ಪರಿಚಯ ವಾಡಿ ಕೊಡುವ ಪ್ರಾಮಾಣಿಕ ಇತಿಹಾಸ ಗ್ರಂಥದ ಅಭಾವದ ಕಾರಣವಾಗಿ ಅವರನ್ನು ಪೂರ್ಣವಾಗಿ ಅರಿತುಕೊಳ್ಳುವುದು ಕಷ್ಟವಾಗಿದೆ. ತೊಂಬತ್ತೆಂಟು ವರ್ಷಗಳಷ್ಟು ದೀರ್ಫಕಾಲ ಇವರು ಬದುಕಿದ್ದರೆಂದು ಹೇಳುವ ಕೆಲವರ ಅಭಿಪ್ರಾಯದ ಪ್ರಕಾರವಾಗಿ ಆಷ್ಟೊಂದು ದೀರ್ಫಕಾಲದಲ್ಲಿ ಇವರು ಯಾವಾಗ ಅಧಿಕಾರದಲ್ಲಿದ್ದರು? ಅಧಿಕಾರ ತ್ಕಾಗ ಮಾಡಿದುದೇಕೆ? ವಿವಾಹವಾಗಿತ್ತೆ ಇಲ್ಲವೆ? ಯಾವ ಯಾವ ಕಾಲದಲ್ಲಿ ಇವರು ಎಲ್ಲೆಲ್ಲಿ ವಾಸವಾಗಿದ್ದರು? ಅಲ್ಲಲ್ಲಿ ನಡೆದ ಘಟನೆಗಳ ಸತ್ಕಾಂಶಗಳಾವುವು? ಎಂಬ ಬಗೆಗೆ ಅನೇಕ ಅನುಮಾನ ಗಳುಂಟಾಗುತ್ತವೆ. ಕನಕದಾಸರ ಬಗೆಗೆ ಅನೇಕ ವಿದ್ವಾಂಸರು ಲೇಖನಗಳನ್ನು ಬರೆದಿದ್ದಾರೆ. ಅವು ಹೆಚ್ಚಾಗಿ ಅವರ ಗ್ರಂಥ ವಿಮರ್ಶೆ, ಹಾಡುಗಬ್ಬಗಳ ಪರಿಚಯ, ಮತ್ತು ಮೌಲ್ಯರೂಪಗಳಿಗೆ ಹಾಗು ಪವಾಡ ೩ ಅದ್ಭುತ ರಮ್ಯ ಕಥೆಗಳಿಗೆ ಸಂಬಂಧಿಸಿದವುಗಳಾಗಿವೆ. ಇವರ ಜೀವನಕ್ಕೆ ಸಂಬಂಧಿಸಿದ ಬಾಡ, ಬಂಕಾಪುರ, ಕಾಗಿನೆಲ್ಲಿ, ಸೋಸಲೆ, ಬೇಲೂರು, ತಿರುಪತಿ, ಉಡುಪಿ, ಕನಕಗಿರಿ ಮುಂತಾದ ಊರುಗಳಲ್ಲಿ ಇವರು ಯಾವಾಗ ಇದ್ದರು? ಅಲ್ಲಿನ ಇವರ ಜೀವನ ವೃತ್ತಕ್ಕೆ ಸಂಬಂಧಿಸಿದ ಘಟನೆಗಳಾವುವು? ಆ ಘಟನೆಗಳಿಂದ ಚರಿತ್ರೆಯ ಮೇಲೆ ಮತ್ತು ತತ್ವಶಾಸ್ತ್ರದ ಮೇಲೆ ಬಿದ್ದ ಹೊಸ ಬೆಳಕೇನು? ಎಂಬುದು ಸ್ಪಷ್ಟವಾಗಿ ಗೋಚರಿತ್ತಿಲ್ಲ. ಅವರು ರಚಿಸಿದ ಗ್ರಂಥಗಳು, ಹಾಡುಗಬ್ಬಗಳು, ಪುರಂದರದಾಸರ ಒಂದೆರಡು ಹಾಡುಗಳು ಮೊದಲಾದವುಗಳಿಂದ ಅವುಗಳ ಪರಿಚಯವಾಗುತ್ತದೆ. ಇದಿಷ್ಟರಿಂದ ಕನಕದಾಸರ ಜೀವನದ ಸ್ಪಷ್ಟವಾದ ಮತ್ತು ಪ್ರಾಮಾಣಿಕವಾದ ಐತಿಹಾಸಿಕ ವೃತ್ತದ ಸಮಗ್ರ ಪರಿಚಯ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.
ಈಗ ಕೆಲವು ತಿಂಗಳ ಹಿಂದೆ ರಾಜ್ಯದ ನಿವೃತ್ತ ಪ್ರಮುಖ ಗ್ರಂಥಪಾಲರಾದ ಶ್ರೀರ್ಮಾ ಎನ್‌.ಡಿ. ಬಗರಿಯವರು ರಾಜ್ಯಸಭಾ ಸದಸ್ಯರಾಗಿರುವ ಕೃಷ್ಣರಾಜ ನಗರದ ಸನ್ಮಾನ್ಶ ಶ್ರೀ ಎಂ. ಬಸವರಾಜು ಆವರೊಡನೆ ನಮ್ಮ ಮನೆಗೆ ಬಂದು, ಕನಕದಾಸರ ಬಗೆಗೆ ಒಂದು ಚಿಕ್ಕ ಗ್ರಂಥ ತಯಾರಿಸಿಕೊಡಲು ಕೇಳಿದರು. ಆಗ ನಾನು ಅನೇಕ ಜಿಜ್ಞಾಸೆಗೊಳಗಾಗಿ ಕೊನೆಗೆ ಒಪ್ಪಿಗೆ ಕೊಟ್ಟೆನಾದರೂ, ರಚನೆಯ ಕಾಲಕ್ಕೊದಗಿದ ಅನೇಕ ತೊಡಕುಗಳನ್ನು ದಾಟಿ, ಒಂದು ಸಮಗ್ರ ಪರಿಚಯ ಮಾಡಿಕೊಡುವುದು ಕಷ್ಟದ ಕೆಲಸವೆಂಬುದರ ಅರಿವಾಯಿತು. ಆದರೂ ಅವರ ಅನೇಕ ಜೀವನ ಘಟನೆಗಳನ್ನು ಯೋಚಿಸಿ ಹೊಂದಿಸಿ ತೊಂಬತ್ತೆಂಟು ವರ್ಷಗಳು ಬದುಕಿರಬಹುದಾದ ಅವರ ಜೀವನ ಪರಿಚಯದ ಒಂದು ಕಿರುಹೊತ್ತಗೆಯನ್ನು ಶ್ರೀ ಬಸವರಾಜು ಅವರ ನೆರವಿನೊಂದಿಗೆ ತಯಾರಿಸಿದೆ… ಈ ಗ್ರಂಥದಲ್ಲಿ ಈ ಪೂರ್ವದಲ್ಲಿ ಇವರ ಬಗೆಗೆ ಬರೆದ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವುಗಳನ್ನೆಲ್ಲ ಸರಿಹೊಂದಿಸಿಕೊಂಡು, ಕನಕದಾಸರ ಹಾಡುಗಳನ್ನು ಹತ್ತಾರು ಸಲ ತಿರುವಿ ಹಾಕಿ, ಅಲ್ಲಿನ ಅಭಿಪ್ರಾಯೆಗಳನ್ನು ತೆಗೆದುಕೊಂಡು ಪದ್ಯಗಳನ್ನು ಅಲ್ಲಲ್ಲಿ ಸೇರಿಸಿದ್ದೇನೆ… ಆದರೆ. ಈ ಚಿಕ್ಕ ಪುಸ್ತಕದಲ್ಲಿನ ದಾಸರ ಜೀವನ ಘಟನೆಗಳು ಹಿಂದು ಮುಂದಾಗಿರಬಹುದು. ಅಲ್ಪ ಸ್ವಲ್ಪ ವೃತ್ಕಾಸ ಗೊಂಡಿರಬಹುದು. ಕೆಲವು ಘಟನೆಗಳನ್ನು ಕೈ ಬಿಟ್ಟರಬಹುದು. ಕೆಲವು ನಮ್ಮ ಊಹೆಗೆ ಸೇರಿದವುಗಳಾಗಿರಬಹುದು. ಇದು ಮುಖ್ಯವಲ್ಲ. ಒಟ್ಟಿನಲ್ಲಿ ಅವರ ಜೀವನವನ್ನು ಹತ್ತಿರದಿಂದ ನೋಡಲು ಸಾಧ್ಯವಿಲ್ಲದ್ದರಿಂದ ದೂರದಿಂದ ನೋಡಿದ ಒಂದು ಇಣುಕು ನೋಟವಾದರೆ ಸಾಕು.
{

%d bloggers like this: