ಚನ್ನಪ್ಪ ಎರೇಸೀಮೆ

ಉದ್ದಾನೇಶ ಚರಿತೆ

ಷಟ್ಪದಿಕಾವ್ಕ ಕಳೆದ ಶತಮಾನ ಕಂಡ ನಮ್ಮ ನಾಡಿನ ಮಹಾಶಿವಯೋಗಿ ಉದ್ದಾನೇಶ್ಚರರ ಜೀವನ ಮತ್ತು ಸಾಧನೆಗಳನ್ನು ಕುರಿತದ್ದು.

ನಮ್ಮ ಸಾರಸ್ವತ ಲೋಕದ ವಾಜ್ಮಯ ತಪಸ್ವಿ ಇದೀಗ ತಮ್ಮ ೭೪ನೆಯ ವಯಸ್ಸಿನಲ್ಲಿ ಒಂದು ಮಹಾಕೃತಿಯನ್ನು ರಚಿಸಿದ್ದಾರೆ. ಹಿನ್ನೆಲೆಯಾಗಿ ಸಿದ್ದಗಂಗಾಕ್ಷೇತ್ರ‍ ಮತ್ತು ಅದರ ಯತಿಪರಂಪರೆಯ ವಿವರ, ಮುನ್ನಲೆಯಾಗಿ ಉದ್ದಾನ ಯತಿಗಳ ಕರಕಮಲ ಸಂಜಾತರಾದ ಅಖಿಲಭಾರತ ಖ್ಯಾತಿಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪಾವನ ಚರಿತ್ರೆ ಬಂದಿದೆ. ೧೮ ಅಧಾಯಗಳ ೧೨೫೬ ಭಾಮಿನಿ ಷಟ್ಪದಿಗಳ ಹರವಿನಲ್ಲಿ ಪ್ರಕಟಗೊಂಡ ಉದ್ದಾನೇಶ ಚರಿತೆ ಪ್ರಾಚೀನ ಷಟ್ಪದಿಕಾರರ ಕಾವ್ಶಗಳ ಸಾಲಿನಲ್ಲಿ ೨೦ನೆಯ ಶತಕದಲ್ಲಿಯೂ ತನ್ನ ಸ್ಹಾನ ಕಾಪಾಡಿಕೊಳ್ಳಬಲ್ಲುದು.

ಪುಸ್ತಕದ ಬಗ್ಗೆ ಅಭಿಪ್ರಾಯಗಳು

‍’ಭಾರತೀಯ ಸಿದ್ಧಾಂತಗಳಲ್ಲಿ ಷಟ್‌ಸ್ಟಲ ಸಿದ್ಧಾಂತದ ಸ್ನಾನವನ್ನು ಓದಿ ಮಹದಾನಂದ ಭರಿತನಾದೆನು..  ಲೇಖನದಿಂದ ಪರಿಷತ್ಪ‍ತ್ರಿಕೆಯ ಗೌರವ ಹೆಚ್ಚಿದೆಯೆಂದು ಭಾವಿಸಿದ್ದೇನೆ’

– ಟಿ. ಚನ್ನಪ್ಪ, ಉಡುಕುಂಟೆ

ನಿಮ್ಮ ಷಟ್‌ಸ್ಟಲ ಸಿದ್ಧಾಂತ ಕುರಿತ ಲೇಖನ ಓದಿದೆಶರಣ ಸಾಹಿತ್ಯವನ್ನು ಬೇರೆಲ್ಲರಿಗಿಂತಲೂ ತಾವು ಸರಳವಾಗಿ, ಸುಂದರವಾಗಿ ನಿರೂಪಿಸುತ್ತೀರೆಂದು ನನ್ನ ಅನಿಸಿಕೆ; ಇದು ಉತ್ಪ್ರೇಕ್ಷೆಯಲ್ಲ.

– ಎಂ. ನೀಲಪ್ಪ, ಬೆಂಗಳೂರು

ನಿಮ್ಮ ಭಾರತೀಯ ಸಿದ್ಧಾತಗಳ ಷಟ್‌ಸ್ಟಳ ಸಿದ್ಧಾಂತದ ಸ್ನಾನವನ್ನು ಓದಿದಾಗ ನನ್ನ ಎಲ್ಲ ಪೂರ್ವಾಗ್ರಹ ಪೀಡಿತ ತಿಳುವಳಿಕೆಗಳು ಮಂಗಮಾಯವಾಗಿ ಹೋದವು.

ರಾಮಚಂದ್ರಪಾಟೀಲ, ಧಾರವಾಡ

ಮನನೀಯಅನುಕರಣೆ ಲೇಖನ; ಪ್ರಾಚೀನ ವೇದೋಪನಿಷದಾಗಮಶಾಸ್ತ್ರ ಪುರಾಣಗಳ ತಿರುಳರಿತವರು ಇರಬಹುದು. ಇಷ್ಟೊಂದು ದಿಟ್ಟತನದಿಂದ ಹೇಳುವವರಿದ್ದಾರೆಯೇ?

ಕೆ. ದೊಡ್ಡನಗೌಡ, ಜೋಳದರಾಶಿ

ನಿಮ್ಮ ಲೇಖನ ಓದಿ ನಮ್ಮಲ್ಲರಿಗೆ ಆನಂದವಾಯಿತು. ವಿಚಾರಸರಣಿ ಸ್ಪಷ್ಟತೆ. ಶೈಲಿ ಮತ್ತು ಅನುಭಾವದ ಆಳ ಲೇಖನದ ತುಂಬ ತುಂಬಿಕೊಂಡಿರುವುದು ತಮ್ಮ ಪಾಂಡಿತ್ಯಕ್ಕೆ ನಿದರ್ಶನತಮ್ಮ ಲೇಖನದಿಂದ ಪರಿಷತ್‌ ಪತ್ರಿಕೆಯನ್ನು ಪ್ರಾಜ್ಞ ಓದುಗರು ಕಾಯ್ದಿರಿಸುವಂತಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

– ಈಶ್ವರಚಂದ್ರ ಚಿಂತಾಮಣಿ, ವಿಜಾಪುರ

ಸೇವಾ ಸಂಪದದಲ್ಲಿ ನಿಮ್ಮ ಲೇಖನವೀರಶೈವಮಠಗಳುಬಹಳ ಅಭ್ಯಾಸ ಪೂರ್ಣವಾಗಿದೆ

ಗೌ.. ಉಮಾಪತಿಶಾಸ್ತ್ರಿ, ಧರ್ಮಸ್ಹಳ

ವೀರಶೈವಮಠಗಳು ಲೇಖನ ಅಗಾಧವಾದುದು; ವಿಚಾರಯುಕ್ತವಾದದ್ದು; ವ್ಯಾಸಂಗಿಗಳಿಗೆ ತುಂಬಾ ಉಪಯುಕ್ತವಾದದ್ದು ಮತ್ತು ಶ್ಲಾಘನೀಯವಾದದ್ದು.

ಕೆ. ಮಾದಪ್ಪ ಬೆಂಗಳೂರು

{

‍ ಹೊಸ ಕಾವ್ಯವೊಂದನ್ನು, ಆದು ಬಿಡುಗಡೆಯಾಗುವ ಮುಂಚೆಯೇ, ಓದುವ ಮತ್ತು ಓದಿದ ಮೇಲೆ ಅನ್ನಿಸಿದ್ದನ್ನು ಬರೆಯುವ ಅಪೂರ್ವ ಅವಕಾಶವನ್ನು ನೀಡಿದ ಹಿರಿಯರಾದ ಕವಿವರ್ಯ ಚೆನ್ನಪ್ಪನವರಿಗೆ ನನ್ನ ಕೃತಜ್ಞತೆಗಳು.

ಟಿ.ಆರ್‌. ಮಹಾದೇವಯ್ಯ
ಕನ್ನಡ ನಿಘಂಟು ಉಪಸಂಪಾದಕ (ನಿ)

%d bloggers like this: